Sunday, July 25, 2010

ಹಾಸ್ಯ (ಸುಮ್ಮನೆ ನಕ್ಕುಬಿಡಿ

ಮೇಷ್ಟ್ರು: ಸಿದ್ಧಾ, ಭಾರತ ದೇಶದ ಜನಸಂಖ್ಯೆ ಎಷ್ಟೋ?
ಸಿದ್ದಾ : ತೊಂಭತ್ತಾರು ಕೋಟಿ ತೊಂಭತ್ತಾರು ಲಕ್ಷದ ಒಂದು... ಎರಡು... ಮೂರು...ನಾಲ್ಕು.
ಮೇಷ್ಟ್ರು : ಏನೋ ನಿನ್ನ ಪಿಂಡ. ಒಂದು... ಎರಡು...ಸರಿಯಗಿ ಹೇಳೋ?
ಸಿದ್ದಾ : ಸೆಕೆಂಡಿಗೊಂದು ಮಗು ಹುಟ್ತಾ ಇದ್ರೆ, ಇನ್ನು ಹೇಗೆ ಹೇಳಲಿ ಸಾರ್!

ಬೆಳಕು
ಟೀಚರ್: ಶಬ್ದ ಮತ್ತು ಬೆಳಕುಗಳಲ್ಲಿ ಯಾವುದು ವೇಗವಾಗಿ ಚಲಿಸುತ್ತದೆ?
ಮೋಹನ: ಬೆಳಕು
ಟೀಚರ್: ಅದನ್ನು ಹೇಗೆ ಸಿದ್ಧಪಡಿಸುತ್ತಿಯ?
ಮೋಹನ: ಮಿಂಚಿದಾಗ ಅದು ನಮಗೆ ಮೊದಲು ಕಾಣುತ್ತದೆ ನಂತರ ಗುಡುಗು ಕೇಳುತ್ತದೆ.
ಟೀಚರ್: ಸರಿ
ಗುಂಡ: ನನಗನಿಸುತ್ತದೆ ಶಬ್ದವೇ ಬೆಳಕಿಗಿಂತ ವೇಗವಾಗಿ ಚಲಿಸುವುದು.
ಟೀಚರ್: ಅದು ಹೇಗೆ?
ಗುಂಡ: ನಮ್ಮ ಮನೆಯಲ್ಲಿ ನಾನು ಜನರೇಟರ್ ಶುರು ಮಾಡಿದಾಗ, ಮೊದಲು ಶಬ್ದ ಬರುತ್ತದೆ, ನಂತರ ಬೆಳಕು ಬರುತ್ತದೆ

ರಾಜಕಾರಣ ಪ್ರವೇಶ ಮಾಡುತ್ತಿದ್ದ ಮಗನಿಗೆ ಅಪ್ಪ ಹೇಳಿದ "ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ 
ಜತೆಗೆ ವಿವೇಚನೆ ಮುಖ್ಯ" 
ಮಗ "ಪ್ರಾಮಾಣಿಕತೆ ಎಂದರೆ?" 
ಅಪ್ಪ "ಅಂದರೆ ನೀನು ಮಾತುಕೊಟ್ಟರೆ ಅದನ್ನು ಪಾಲಿಸಬೇಕು" 
ಮಗ "ಹಾಗಾದರೆ ವಿವೇಚನೆ ಎಂದರೇನು?" 
ಅಪ್ಪ "ಮಾತು ಕೊಡದೇ ಇರೋದೆ" 
ತಿಮ್ಮನ ಹೆಂಡತಿಯನ್ನು ಡಾಕ್ಟರ್ ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು. 
"ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ" 
"ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆ ಮಧ್ಯೆ 
ನಿಲ್ಲಿಸಿಬಿಡುತ್ತಾಳೆ" 
"ಏತಕ್ಕೆ?" 
"ಉಸಿರಾಡಲಿಕ್ಕೆ" 
ಗಂಡ ಹೆಂಡತಿ ಜಗಳವಾಡುತ್ತಿದ್ದುದನ್ನು ಅವನು ಸ್ನೇಹಿತ ಅಕಸ್ಮಾತ್ ನೋಡಿಬಿಟ್ಟ. ಮಾರನೆ ದಿನ ಆ 
ಮಿತ್ರ ಜಗಳವಾಡುತ್ತಿದ್ದ ಸ್ನೇಹಿತನನ್ನು ಕೇಳಿದ, "ನಿನ್ನೆ ಹೆಂಡತಿಯೊಡನೆ 
ಜಗಳವಾಡುತ್ತಿದ್ದೆಯಲ್ಲ, ಕೊನೆಗೆ ಏನಾಯಿತು?" 
"ಅವಳು ನನ್ನೆದುರು ಮೊಣಕಾಲೂರಿದಳು" 
"ಅದು ಹೇಗೆ ಸಾಧ್ಯವಾಯಿತೋ ಮಹರಾಯ?" 
"ನಾನು ಮಂಚದ ಕೆಳಗೆ ನುಸುಳಿದ್ದೆ" 
ಕೋರ್ಟಿನಲ್ಲಿ ಪಾಟೀಸವಾಲು ನಡೆದಿತ್ತು. "ನೀವು ಯಾರು?" ಕಟಕಟೆಯಲ್ಲಿ ನಿಂತ ಸಾಕ್ಷಿಯನ್ನು 
ಪ್ರಶ್ನೆಸಿದ ವಕೀಲ. ಸ್ವರ್ಣಾಭರಣಗಳ ವ್ಯಾಪರ ಮಾಡುತ್ತಿದ್ದ ವ್ಯಾಪರಿ ಒಂದು ಕ್ಷಣವೂ ತಡಮಾಡದೆ 
ಉತ್ತರಿಸಿದ "ನಿಮಗೆ ಗೊತ್ತೇ ಇರುವ ಹಾಗೆ ನಾನೊಬ್ಬ ಸದ್ಗೃಹಸ್ಥ". "ಸರಿಯಗಿಯೇ ಹೇಳಿದಿರಿ. 
ಅದಕ್ಕಿಂತ ಮೊದಲು ಏನಾಗಿದ್ದಿರಿ?" ವಕೀಲರಿಂದ ಕೂಡಲೇ ಬಂತು ಎರಡನೆ ಪ್ರಶ್ನೆ. 
ಶೀಲಾ "ರೀ ಒಂದು ಸೋಪು ಕೊಡಿ." 
ತಿಮ್ಮ "ಮೇಡಂ ಈ ಸೋಪು ತಗೊಳ್ಳಿ. ಬಟ್ಟೆ ಬೆಳ್ಳಗಾಗುತ್ತೆ." 
ಶೀಲಾ "ಹಾಗಾದ್ರೆ ಅದು ಬೇಡಾ. ನಮ್ಮವರ ಕಪ್ಪುಕೋಟು ಬೆಳ್ಳಗಾದ್ರೆ ಕೋರ್ಟಿಗೆ ಹೋಗುವುದು 
ಹೇಗೆ?" 
ಶೀಲಾ ಪ್ಯಾರಾಚೂಟ್ ಕಂಪನಿಯೊಂದರ ಸೇಲ್ಸ್ ಗರ್ಲ್. ಒಮ್ಮೆ ಗಿರಾಕಿಯೊಬ್ಬರೊಡನೆ ನಡೆದ 
ಮಾತುಕತೆ. 
ಶೀಲಾ "ನೋಡಿ ನಮ್ಮ ಕಂಪನಿಯ ಪ್ಯಾರಾಚೂಟ್ ಚೆನ್ನ್ನಾಗಿ ಬರುತ್ತೆ." 
ಗಿರಾಕಿ "ಹೌದಾ, ಮೇಡಂ ನಾವು ವಿಮಾನದಿಂದ ಧುಮುಕುವಾಗ ನಿಮ್ಮ ಪ್ಯಾರಚೂಟಿನ ಗುಂಡಿ ಅದುಮಿದರೂ 
ಬಿಚ್ಚಿಕೊಳ್ಳದಿದ್ದರೆ ಏನು ಮಾಡುವುದು?" 
ಶೀಲಾ "ತತ್ಕ್ಷಣ ಬನ್ನಿ, ಬದಲಾಯಿಸಿ ಕೊಡ್ತೀವಿ." 
ರಾಜರು ಹೋದರು. ರಾಜಧಾನಿ ಎಲ್ಲಿಗೆ ಹೋಗಬೇಕು? ದಿಲ್ಲಿಗೆ ಬಂದ ತಿಂಮ ಒಂದು ಸಲ. ಕರ್ನಾಟಕ 
ಸಂಘದಲ್ಲಿ ತಿಂಮನ ಭಾಷಣ. ಮುಗಿಯಿತು ಕಾರ್ಯಕ್ರಮ. ತಿಂಮ ಓಡಿ ಬಂದು ಗೋಡೆ ಮುಟ್ಟಿ ಮರಳಿ 
ಹೋಗುವ ಆಸಾಮಿಯೇ? ಕೆಂಪುಕೋಟೆ ನೋಡಿದ. ತಾಜಮಹಲಿಗೂ ಬಂದ. ಕ್ಷೇತ್ರ ಪುರೋಹಿತರ ಜಾತಿಯ 
ಗೈಡ್ಗಳಿಗೆ ತಾಜಮಹಲ್ ಬಳಿ ಕೊರತೆಯಿಲ್ಲ. ಆ ಮಹೋನ್ನತ ಕಲೆಯ ಬಗ್ಗೆ ದೀರ್ಘವಾದ 
ಉಪನ್ಯಾಸವನ್ನೇ ಮಾಡಿದ ತಿಂಮನ ದರ್ಶಕ. ಏನೂ ತಿಳಿಯಲಿಲ್ಲ ಕಲಾತೀತನಾದ ತಿಂಮನಿಗೆ. ಪಾಪ! 
"ಒಂದು ಮಾತನ್ನು ಮಾತ್ರ ಗಮನಿಸಬೇಕು ಸ್ವಾಮಿ" 
"ಯಾವುದಯ್ಯಾ ಅದು?" ತಿಂಮ ಕೇಳಿದ. 
"ಸಹಸ್ರಾರು ವರ್ಷಗಳಾದವು ಈ ತಾಜಮಹಲನ್ನು ಕಟ್ಟಿ, ಅಲ್ಲವೇ? ಒಂದು ಚಿಕ್ಕ ರಿಪೇರಿ ಇಲ್ಲ . 
ಸುಣ್ಣಬಣ್ಣವಿಲ್ಲ." 
"ತಿಳಿಯಿತು ಬಿಡು" ಎಂದ ತಿಂಮ "ನಾನಿರುವ ಮನೆಯವನೇ ಇದರ ಮಾಲಿಕನಿರಬೇಕು." 
ಮೇಷ್ಟ್ರು: ಸಿದ್ಧಾ, ಭಾರತ ದೇಶದ ಜನಸಂಖ್ಯೆ ಎಷ್ಟೋ? 
ಸಿದ್ದಾ : ತೊಂಭತ್ತಾರು ಕೋಟಿ ತೊಂಭತ್ತಾರು ಲಕ್ಷದ ಒಂದು... ಎರಡು... ಮೂರು...ನಾಲ್ಕು. 
ಮೇಷ್ಟ್ರು : ಏನೋ ನಿನ್ನ ಪಿಂಡ. ಒಂದು... ಎರಡು...ಸರಿಯಗಿ ಹೇಳೋ? 
ಸಿದ್ದಾ : ಸೆಕೆಂಡಿಗೊಂದು ಮಗು ಹುಟ್ತಾ ಇದ್ರೆ, ಇನ್ನು ಹೇಗೆ ಹೇಳಲಿ ಸಾರ್! 
ಹುಚ್ಚರಿಬ್ಬರು ಮಾತನಾಡುತ್ತಿದ್ದರು. 
ಮೊದಲನೇ ಹುಚ್ಚ : ಲೋ ನೋಡ್ತಾ ಇರು ಸದ್ಯದಲ್ಲೇ ನಾನು ಭಾರತದ ಪ್ರಧಾನ ಮಂತ್ರಿಯಾಗುತ್ತೇನೆ. 
ಎರಡನೇ ಹುಚ್ಚ : ಅದು ಸಾಧ್ಯವಿಲ್ಲ. 
ಮೊದಲನೇ ಹುಚ್ಚ : ಏಕೆ ಸಾಧ್ಯವಿಲ್ಲ? 
ಎರಡನೇ ಹುಚ್ಚ : ನಾನು ಆ ಸ್ಥ್ಥಾನಕ್ಕೆ ರಾಜಿನಾಮೆ ನೀಡಲು ತಯಾರಿಲ್ಲ. 
"ಮಾರಾಟ ಮಾಡುವುದರ ಬಗ್ಗೆ ನಿಮಗೇನಾದರೂ ಅನುಭವವಿದೆಯೇ?" ಎಂದು ಸೇಲ್ಸ್ಮ್ಯಾನ್ ಕೆಲಸಕ್ಕೆ 
ಸಂದರ್ಶನಕ್ಕೆ ಬಂದ ವ್ಯಕ್ತಿಯನ್ನು ಆ ಕಂಪನಿಯ ಸೇಲ್ಸ್ ಮ್ಯಾನೇಜರ್ ಪ್ರಶ್ನಿಸಿದರು. "ಓಹೋ... 
ಸಾಕಷ್ಟು ಇದೆ ಸಾರ್ ... ನಾನು ನನ್ನ ಮನೆ ಮಾರಿದ್ದೇನೆ, ಕಾರು ಮಾರಿದ್ದೇನೆ, ಟಿವಿ. 
ಮಾರಿದ್ದೇನೆ. ನನ್ನ ಹೆಂಡತಿಯ ಮೈಮೇಲಿನ ಎಲ್ಲ ಆಭರಣಗಳನ್ನೂ ಸಹ..." 
ನಿಜವಾದ ಇರುವೆಗಳೇ
ಅಂದು ಗುಂಡ ಮೊದಲ ಸಲ ವಿಮಾನ ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ ಬಳಿ ಕೇಳಿ ತಿಳಿದುಕೊಂಡಿದ್ದನು..
ಗುಂಡ : ವಾಹ್! ಅವರೆಲ್ಲಾ ಹೇಳಿದ್ದು ನಿಜ! ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ...
ಗಗನ ಸಖಿ(air hostess): ಸಾರ್! ಅವುಗಳು ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ...
ಇವಗಿನ್ನೂ 
ಒಮ್ಮೆ ಗುಂಡ ಹಾಗೂ ಮಿತ್ರರು ಪ್ರವಾಸಕ್ಕೆ ಹೋಗುತ್ತರೆ..
ರಾಮಣ್ಣ: ಅಲ್ನೋಡು! ಆ ಪುರಾತನ ದೇವಸ್ತಾನ ಸುಮಾರು ೪೦೦೦ (4000)(ನಾಲ್ಕು ಸಾವಿರ) ವರ್ಷ ಹಳೆಯದು..
ಗುಂಡ : ಸುಮ್ನೆ ಬೋಗಳೆ ಬಿಡಬೇಡ! ಇವಗಿನ್ನೂ (2009)!
"ಮೀಯಾಂವ್"!
ಸಂತ: ನನ್ನ ಬೆಕ್ಕು ತನ್ನ ಹೆಸರು ತಾನೇ ಹೇಳುತ್ತದೆ!
ಬಂತಾ: ನಿಜವಾಗಿಯೂ?! ಏನದರ ಹೆಸರು?
ಸಂತ: "ಮೀಯಾಂವ್"!
ಶಾಕ್ ಹೊಡೆಯುವುದಿಲ್ಲವೇ
ಸಂತ: ನಾವು ನೀರಿನಿಂದೇಕೆ ವಿದ್ಯುತ್ ಶಕ್ತಿ ಉತ್ಪಾದಿಸುತ್ತೇವೆ?
ಬಂತಾ : ಇಲ್ಲದಿದ್ದರೆ, ನಾವು ನೀರು ಕುಡಿಯುವಾಗ ನಮಗೆ ಶಾಕ್ ಹೊಡೆಯುವುದಿಲ್ಲವೇ?!
ಕೊಡೆಯಲ್ಲಿ ತೂತು
ರಾಮಣ್ಣ: ಹೇ.. ಕೊಡೆಯಲ್ಲಿ ತೂತು ಯಾಕೆ ಮಾಡಿದೆ?!
ಬೂಬಣ್ಣ: ಅಯ್ಯೋ ಮೂರ್ಖಾ! ಮತ್ತೆ ಮಳೆ ನಿಂತು ಹೋದರೆ ನಂಗೆ ಹೇಗೆ ಗೊತ್ತಗುತ್ತೆ
ಸತ್ತ ಜಿರಳೆ
ಅಪ್ಪ: ಸುಮ್ಮನಿರು! ಊಟ ಮಾಡುವಾಗ ಮಾತನಾಡಬಾರದು!
ಮಗ: ಆದ್ರೆ ಅಪ್ಪಾ!...
ಅಪ್ಪ: ಹೇಳಿದ್ದು ಗೊತ್ತಾಗಲಿಲ್ವೇ?! ಸುಮ್ಮನಿರು!
ಮತ್ತೆ ಮಗ ಸುಮ್ಮನೇ ಊಟ ಮಾಡಿದ. ಅವರ ಊಟ ಮುಗಿದ ನಂತರ...
ಅಪ್ಪ: ಈಗ ಹೇಳು, ನಿಂಗೇನು ಹೇಳ್ಬೇಕಿತ್ತು?
ಮಗ: ನಿಮ್ಮ ಊಟದಲ್ಲಿ ಒಂದು ಸತ್ತ ಜಿರಳೆ ಬಿದ್ದಿತ್ತು. ಇಷ್ಟೇ ಹೇಳ್ಲಿಕ್ಕಿತ್ತು
ನಾಯಿ ಕಾಟ
ಸಂತಾ ವೈದ್ಯರ ಬಳಿಗೆ ಹೋಗಿ, ನಮ್ಮ ಮನೆಯ ಅಕ್ಕಪಕ್ಕ ನಾಯಿಗಳದ್ದೇ ಸಮಸ್ಯೆ. ನಾಯಿಗಳೆಲ್ಲಾ ಸೇರಿ ರಾತ್ರಿಯಿಡೀ ಬೊಗಳುವುದರಿಂದ ರಾತ್ರಿ ನಿದ್ದೆನೇ ಬರುವುದಿಲ್ಲ ಎಂದು ತನ್ನ ಸಮಸ್ಯೆ ತೋಡಿಕೊಂಡಾಗ, ವೈದ್ಯರು ಒಂದಿಷ್ಟು ಮಾತ್ರೆಗಳನ್ನು ಕೊಟ್ಟು ಇದನ್ನು ತಗೋ ನಿನ್ನ ಸಮಸ್ಯೆ ಪರಿಹಾರ ಆಗುತ್ತದೆ ಎಂದರು.
ಎರಡು ದಿನ ಬಿಟ್ಟು ಮತ್ತೆ ವೈದ್ಯರ ಬಳಿಗೆ ಬಂದ ಸಂತಾ ಇನ್ನಷ್ಟು ಸುಸ್ತಾಗಿದ್ದ. ಕಣ್ಣೆಲ್ಲಾ ಕೆಂಪಗಾಗಿತ್ತು. ಏನಾಯ್ತು ಎಂದು ವೈದ್ಯರು ಆತಂಕದಿಂದ ಕೇಳಿದರು.
ಏನು ಹೇಳಲಿ, ನಾಯಿಗಳನ್ನು ಹಿಡಿಯಲು ಅವುಗಳ ಹಿಂದೆ ಓಡಿ ಓಡಿ ಸುಸ್ತಾಯ್ತು. ಹಿಡಿದ ಬಳಿಕ ಅವುಗಳಿಗೆ ಮಾತ್ರೆ ತಿನ್ನಿಸಲು ಇನ್ನೂ ಕಷ್ಟವಾಯ್ತು ಎಂದ ಸುಸ್ತಾದ ಸಂ
ಸಮಾಧಿಯ ಮೇಲೆ ಕುಳಿತಿದ್ದ ಒಬ್ಬ ವ್ಯಕ್ತಿಯನ್ನು ಕಂಡು ಸಂತಾ ಕೇಳಿದ. ಏನು ಸ್ವಾಮಿ, ಇಷ್ಟು ಹೊತ್ತಿನಲ್ಲಿ ಇಲ್ಲಿ ಒಬ್ಬರೇ ಕುಳಿತಿದ್ದೀರಲ್ಲ. ನಿಮಗೆ ಹೆದರಿಕೆ ಆಗಲ್ವೆ.ಬಂತಾ-ಏನಿಲ್ಲ ಸಾರ್, ಒಳಗೆ ಒಳ್ಳೆ ಸೆಖೆ. ಅದಕ್ಕೆ ಹೊರಗೆ ಬಂದಿದ್ದಿನಿ.
ಪರ್ಸ್ ಸಿಕ್ಕಿದ್ರೆ..   
ಟೀಚರ್: ದಾರಿಯಲ್ಲಿ ಪರ್ಸ್ ಸಿಕ್ಕಿದ್ರೆ ಏನ್ಮಾಡ್ತೀಯಾ?
ಸಂತಾ: ಬಿಸಾಕ್ತೀನಿ..
ಟೀಚರ್: ಹಾಗ್ಮಾಡಿದ್ರೆ ಪರ್ಸ್ ಯಾರಿಗೂ ಸಿಗದೇ ಹೋಗುತ್ತಲ್ಲ?
ಸಂತಾ: ಅದಕ್ಕಿಂತ ಮೊದ್ಲು ಅದ್ರಲ್ಲಿರೋ ದುಡ್ಡು ತೆಗ್ದಿರ್ತೀವಲ್ವ ಮೇಡಂ..
ಸೀರಿಯಸ್ ಜೋಕ್ಸ್!
ಭಲೇ ಗೌಡ!
ದೇವೇಗೌಡರು ದೇಶದ ಬಗ್ಗೆ ಯೋಚನೆ ಮಾಡುತ್ತಾ ಮಲಗಿದ್ದರು. ಯಾಕೋ ಕಣ್ಬಿಟ್ಟು ನೋಡ್ತಾರೆ, ಪಕ್ಕದಲ್ಲಿ ಬ್ರಹ್ಮದೇವ! ಕೂಡಲೇ ಗೌಡ್ರು ತಮ್ಮ ಎರಡೂ ಕೈಗಳನ್ನೂ ಜೋಡಿಸಿ, ಅಡ್ಡಡ್ಡ ಬಿದ್ದರು. ಆಗ ಬ್ರಹ್ಮದೇವ ‘ಬೇಕಾದ ವರ ಕೇಳು’ ಎಂದ.
‘ಸಡನ್ನಾಗಿ ವರಕೇಳು ಎಂದರೆ ಕಷ್ಟ. ನಾಳೆ ಬಾ ಯೋಚಿಸಿ ಬರೆದಿಡ್ತೀನಿ’ ಎಂದ ದೇವೇಗೌಡರು ಸ್ವಲ್ಪ ಟೈಮ್ ಕೇಳಿದರು. ಹಗಲು ರಾತ್ರಿ ನಿದ್ದೆ ಗೆಟ್ಟು ಬೇಡಿಕೆಗಳ ದೊಡ್ಡ ಪಟ್ಟಿಯನ್ನೇ ಸಿದ್ಧ ಮಾಡಿದರು. ದೇವರು ಬಂದಾಗ ದೊಡ್ಡದೊಂದು ಪಟ್ಟಿಯನ್ನು ಕೊಟ್ಟರು. ಪಟ್ಟಿ ಓದಿದ ಬ್ರಹ್ಮದೇವ ನಾಪತ್ತೆ!
ಯಾಕೆ ಅಂದ್ರೆ: ಮರೆವಿನಲ್ಲಿ ಗೌಡರು ತಮ್ಮ ಬೇಡಿಕೆ ಪಟ್ಟಿ ಬದಲು, ಜೆಡಿಎಸ್ ಪ್ರಣಾಳಿಕೆ ಪಟ್ಟಿಯನ್ನು ಕೊಟ್ಟಿದ್ದರು!
ಯಡ್ಡಿ ಖುಷಿ!
ಯಡಿಯೂರಪ್ಪ ಬಲು ಖುಷಿಯಲ್ಲಿದ್ದರು. ಈ ಹಿಂದೆ ಎರಡೂ ಕಿವಿಗೆ ದೇವೇಗೌಡರು ಹೂವು ಮುಡಿಸಿದ್ದಾರೆ. ಎರಡೂ ಕಿವಿ ಖಾಲಿಯಿಲ್ಲದ ಕಾರಣ, ಮುಂದಿನ ಸಲ ಗೌಡರ ಹೂವು ಮುಡಿಸೋ ಪ್ರಯತ್ನ ಫಲಿಸೋದಿಲ್ಲ ಅನ್ನೋದು ಅವರ ನಂಬಿಕೆ. ಆದರೆ ದೇವೇಗೌಡರು ಈ ಸಲ ಹೂವಿಡೋ ಹಳೇ ಐಡಿಯಾ ಪಕ್ಕಕ್ಕಿಟ್ಟು, ನಾಮ ಹಾಕಲು ಮುಂದಾಗಿದ್ದಾರೆ. ತಿರುಪತಿಯಿಂದ ಒಂದು ಲೋಡು ನಾಮದ ಉಂಡೆ ತರಿಸಿದ್ದಾರೆ ಅನ್ನೋದು ಅವರಿಗೆ ಗೊತ್ತಿರಲಿಲ್ಲ!
*ಹಡಗಲ್ಲಿ ನಾಡಿನ ನಾಯಕರು!
ದೇವೇಗೌಡ, ಎಸ್.ಎಂ.ಕೃಷ್ಣ, ಯಡಿಯೂರಪ್ಪ, ಖಗೆ, ಧರ್ಮಸಿಂಗ್ ಸೇರಿದಂತೆ ನಾಡಿನ ಪ್ರಮುಖರೆಲ್ಲರೂ ಹಡಗು ಹತ್ತಿದ್ದರು. ಒಂದು ತೂತಿನ ಪರಿಣಾಮ ನೀರು ಒಳ ಬರುತ್ತಿತ್ತು. ಒಂದು ವೇಳೆ ಹಡಗು ಮುಳುಗಿದರೆ ಯಾರು ಉಳಿಯುತ್ತಾರೆ?
ತುಂಟ ಮತದಾರನ ಉತ್ತರ : ಯಾರು ಉಳಿಯುವರೋ ಖಾತ್ರಿ ಇಲ್ಲ, ಕನ್ನಡಿಗರಂತೂ ಉಳಿಯುತ್ತಾರೆ!
*ಎಲೆಕ್ಷನ್ ಗಾದೆಗಳು
* ಮತದಾರರಿಗೊಂದು ಕಾಲ, ಎಂಎಲ್ಎಗಳಿಗೊಂದು ಕಾಲ!
* ಬಿ ಫಾರಂಗೋದ ಮಾನ, ಇನ್ನೊಂದು ಪಕ್ಷಕ್ಕೆ ಜಿಗಿದರೆ ಬರುತ್ತಾ?
* ಎಲ್ಲಾ ಶಾಸಕರ ಮನೆ ದೋಸೆಯೂ ತೂತೇ.
* ಗೆದ್ದ ಪಕ್ಷದ ಬಾಲ ಹಿಡಿ
* ಗೆಲ್ಲರಾರದ ಅಭ್ಯರ್ಥಿ ಕ್ಷೇತ್ರ ಡೊಂಕು ಎಂದ!
ನೇಣು ಹಾಕಿದ್ದು..   
ಸಂತಾ ಮತ್ತು ಬಂತಾ ಮೆಂಟಲ್ ಆಸ್ಪತ್ರೆಗೆ ಸೇರಿದ್ದರು. ಒಂದು ದಿನ ಸಂತಾ ಈಜುಕೊಳಕ್ಕೆ ಬಿದ್ದು ಬಿಟ್ಟ. ಇದನ್ನು ನೋಡಿದ ಬಂತಾ ತಕ್ಷಣ ನೀರಿಗೆ ಹಾರಿ ಸಂತಾನನ್ನು ಬದುಕಿಸಿದ.
ಡಾಕ್ಟರ್: ನಿನಗೆ ಒಂದು ಒಳ್ಳೆಯ ಸುದ್ದಿ ಹಾಗೂ ಕೆಟ್ಟ ಸುದ್ದಿ ಇದೆ. ಒಳ್ಳೆ ಸುದ್ದಿ ಏನಂದರೆ ನಿನ್ನನ್ನು ಅಸ್ಪತ್ರೆಯಿಂದ ಬಿಡುಗಡೆ ಮಾಡುತ್ತೇವೆ. ನಿನಗೆ ನೀರಿಗೆ ಹಾರಲು ಮತ್ತು ಒಬ್ಬನ ಜೀವ ಉಳಿಸುವಷ್ಟು ಬುದ್ಧಿ ಬಂದಿದೆ. ಕೆಟ್ಟ ಸುದ್ದಿ ಏನೆಂದರೆ ನೀನು ಬದುಕಿಸಿದ ವ್ಯಕ್ತಿ ಬಾತ್ ರೂಂನಲ್ಲಿ ನೇಣು ಹಾಕಿಕೊಂಡಿದ್ದಾನೆ.
ಬಂತಾ: ಅವನನ್ನು ಮೇಲೆ ತೂಗಿ ಹಾಕಿದ್ದು ನಾನೇ.. ನೀರಿಗೆ ಬಿದ್ದಿದ್ದ ಅಲ್ವಾ.. ಅದಕ್ಕೆ ಒಣಗಲಿ ಅಂತಾ..
ಮದುವೆ ಮತ್ತು ಸುಖ   
ಸಂತಾ: ಪ್ರೀತಿಸಿ ಮದ್ವೆಯಾದ್ರೆ ಸುಖವಾಗಿ ಇರಬಹುದೋ ಅಥವಾ ಅಪ್ಪ-ಅಮ್ಮ ತೋರಿಸಿದ ಹುಡುಗಿ ಕುತ್ತಿಗೆಗೆ ತಾಳಿ ಬಿಗಿದರೆ ಸುಖವಾಗಿ ಬಾಳಬಹುದೋ?
ಬಂತಾ: ಅದೆಲ್ಲ ನಡೆಯಲ್ಲ ಕಣೋ.. ಏನಾದ್ರೂ ಮಾಡಿ ಮದುವೇನ ಮುಂದೆ ಹಾಕ್ತಿರು.. ಮದುವೆ ಮತ್ತು ಸುಖ ಯಾವತ್ತೂ ಒಟ್ಟೊಟ್ಟಿಗೆ ಇರೋಲ್ಲ..
ಬೆತ್ತಲೆ ಚಿತ್ರ ನಿಂದಾ?   
ಸಂತಾ ಮತ್ತು ಆತನ ಹೆಂಡತಿ ನಗ್ನ ಕಲಾ ಪ್ರದರ್ಶನ ವೀಕ್ಷಣೆಗೆ ಹೋಗಿದ್ದರು. ಅಲ್ಲಿ ತನ್ನ ಹೆಂಡತಿಯ ಚಿತ್ರವನ್ನು ನೋಡಿ ಪ್ರಶ್ನಿಸಲಾರಂಭಿಸಿದ.
ಸಂತಾ: ನಿಜಕ್ಕೂ ಚಿತ್ರ ಬಿಡಿಸಲು ನೀನು ಪೋಸ್ ಕೊಟ್ಟಿದ್ಯಾ?
ಹೆಂಡತಿ: ನಿಂಗೇನು ಹುಚ್ಚು ಹಿಡಿದಿದ್ಯಾ? ಚಿತ್ರ ಬಿಡಿಸೋನು ತನ್ನ ಶುದ್ಧ ಸ್ಮರಣ ಶಕ್ತಿಯಿಂದ ಬಿಡಿಸಿದ್ದಾನೆ.. ಅಷ್ಟೇ..!
ತಪ್ಪು ಮಾಹಿತಿ   
ಡಾಕ್ಟರ್: ಇಲ್ಲಿ ಬರುವ ಮೊದಲು ನೀವು ಎಲ್ಲಿಗೆಲ್ಲಾ ಹೋಗಿದ್ರಿ?
ಸಂತಾ: ಪಕ್ಕದ ಮೆಡಿಕಲ್ಗೆ ಹೋಗಿದ್ದೆ.
ಡಾಕ್ಟರ್: ಅವರೇನಾದ್ರೂ ನಿಮ್ಮನ್ನು ದಾರಿ ತಪ್ಪಿಸಲು ಯತ್ನಿಸಿದರೇ?
ಸಂತಾ: ಹೌದು ಸಾರ್.. ನೀವೊಳ್ಳೆ ಡಾಕ್ಟರ್.. ಅವರಲ್ಲಿಗೇ ಹೋಗಿ ಅಂದ್ರು..!
ಸೋಮಾರಿ ಸಂತಾ   
ಸಂತಾ ರೈಲಿನಲ್ಲಿ ಹೋಗ್ತಿದ್ದ. ಯಾವುದೇ ಸ್ಟೇಷನ್ನಲ್ಲಿ ರೈಲು ನಿಂತಿತ್ತು. ಜೋರು ಮಳೆಯಾಗುತ್ತಿದ್ದ ಕಾರಣ ಕೆಳಗಿಳಿಯಲು ಸೋಮಾರಿತನ ಅಡ್ಡ ಬಂತು. ಅಲ್ಲೇ ಹೊರಗಿದ್ದವನೊಬ್ಬನನ್ನು ಕರೆದು 10 ರೂಪಾಯಿ ಕೊಟ್ಟು, 'ನಮಗಿಬ್ಬರಿಗೆ ತಿನ್ನಲು ಏನಾದ್ರೂ ತಗೊಂಡು ಬಾ' ಎಂದ.
ಸ್ವಲ್ಪ ಹೊತ್ತಿನ ನಂತರ ಬಾಯ್ತುಂಬಾ ತಿನ್ನುತ್ತಾ ಬಂದ ಆತ ಐದು ರೂಪಾಯಿ ವಾಪಸು ಕೊಟ್ಟು, 'ಅಲ್ಲಿ ಒಂದೇ ಪ್ಲೇಟ್ ಇದ್ದದ್ದು' ಎನ್ನಬೇಕೇ..
ಕಳ್ಳತನ
ಪೊಲೀಸ್ ಅಧಿಕಾರಿ ಸಂತಾ ಕಳ್ಳನೊಬ್ಬನನ್ನು ಹಿಡಿದು ವಿಚಾರಣೆ ನಡೆಸುತ್ತಿದ್ದ. ಕೊನೆಗೆ ಸಾಕಾಗಿ ಬುದ್ಧಿ ಹೇಳಲಾರಂಭಿಸಿದ.
ಸಂತಾ: ಯಾಕಪ್ಪ ಕಳ್ಳತನ ಮಾಡ್ತೀಯಾ? ಬಿಟ್ಟು ಬಿಡು..
ಕಳ್ಳ: ಏನು ಮಾಡೋದು ಸಾರ್.. ನಿಮ್ಮ ಮತ್ತು ನನ್ನ ಹೊಟ್ಟೆ ತುಂಬಬೇಕಲ್ಲ...
ಬುದ್ಧಿವಂತ   
ಸಂತಾ ಕಂಠ ಪೂರ್ತಿ ಕುಡಿದು ಮಧ್ಯರಾತ್ರಿ ಕರೆಂಟ್ ಕಂಬದೆದುರು ನಿಂತು ಕೀಲಿ ಹಾಕಲು ಬೀಗ ಹುಡುಕುತ್ತಿದ್ದ.
ಬಂತಾ: ಏನೂ ಪ್ರಯೋಜನವಿಲ್ಲ.. ಮನೆಯಲ್ಲಿ ಯಾರೂ ಇಲ್ವಲ್ಲ.
ಸಂತಾ: ಹಾಗಲ್ಲ ಮಾರಾಯ.. ಮೇಲೆ ನೋಡಂತೆ ಲೈಟ್ ಉರೀತಾ ಇದೆ..
ಕೇಶವರ್ದಕ ತೈಲ   
ಸಂತಾ: ಯಾಕೋ ನಿನ್ನ ತಲೆ ಕೂದಳೆಲ್ಲ ಉದುರ್ತಾ ಇವೆ.. ನಮ್ಮ ಕಂಪನಿಯ ಕೇಶವರ್ದಕ ತೈಲ ಬಳಸಿಲ್ವ?
ಬಂತಾ: ಇಲ್ಲ ಕಣೋ.. ಅದನ್ನು ಬಳಸದೆಯೇ ತನ್ನಿಂತಾನೇ ಕೂದಲು ಉದುರುತ್ತಿದೆ..!
ಮಹಾನುಭಾವ   
ಬಂಗ್ಲೆಯಿಂದ ಹೊರ ಬರುತ್ತಿದ್ದ ಸಂತಾನನ್ನು ನೋಡಿದ ಬಂತಾ ಅಲ್ಲೇ ಆಡುತ್ತಿದ್ದ ಮಗುವೊಂದರಲ್ಲಿ, 'ಆ ಮಹಾನುಭಾವ ಯಾರಪ್ಪಾ?' ಎಂದಾಗ, ಮಗು 'ಅದು ಮಹಾನುಭಾವ ಅಲ್ಲ, ನನ್ನ ಅಪ್ಪ' ಎಂದಿತಂತೆ..!
ಅದೇ ಹೆಂಡತಿ   
ಸಂತಾ ಸಿಕ್ಕಾಪಟ್ಟೆ ಕುಡಿದಿದ್ದ. ಅಮಲಿನಲ್ಲಿ ಯಾರೋ ಒಬ್ಬಳು ಸಿಕ್ಕಿದವಳನ್ನು ಎಳೆದುಕೊಂಡು ಮನೆಗೆ ಬಂದಿದ್ದ. ಮನೆಗೆ ಬಂದು ನೋಡುವಾಗ ಅದು ಸಂತಾನದೇ ಹೆಂಡತಿ. ಆತನನ್ನು ಹುಡುಕಿಕೊಂಡು ಆಕೆ ವೈನ್ ಶಾಪ್ಗೆ ಹೋಗಿದ್ದಳು..!
ನೆನಪಾಗ್ತಿಲ್ವ?   
ಸಂತಾನ ಮನೆಗೆ ನೆಂಟರೊಬ್ಬರು ಬಂದು ವಾರ ಕಳೆದರೂ ವಾಪಸಾಗುವ ಲಕ್ಷಣಗಳು ಕಾಣಿಸುತ್ತಿರಲಿಲ್ಲ. ಏನಾದ್ರೂ ಮಾಡಬೇಕು ಎಂಬ ಯೋಚನೆಯಲ್ಲಿ ಮುಳುಗಿದ್ದ ಸಂತಾ, 'ನಿಮ್ಗೆ ಹೆಂಡತಿ, ಮಕ್ಕಳ ನೆನಪಾಗ್ತಿಲ್ವ ಮಾರಾಯ್ರೆ..' ಎಂದ. ತಟ್ಟನೆ ಪ್ರತಿಕ್ರಿಯಿಸಿದ ನೆಂಟ, 'ನೀವು ಕೇಳಿದ್ದು ಒಳ್ಳೇದಾಯ್ತು.. ನಾಳೇನೆ ಅವರನ್ನು ಇಲ್ಲಿ ಬರಲು ಹೇಳ್ತೇನೆ' ಎನ್ನಬೇಕೇ..!

No comments: