Sunday, July 25, 2010

ಹಾಸ್ಯ (ಸುಮ್ಮನೆ ನಕ್ಕುಬಿಡಿ)3

Democracy ಅಂದ್ರೆ
Democracy ಅಂದ್ರೆ ::::::::
OFF THE PEOPLE
BUY THE PEOPLE
FAR THE PEOPLE

ನಾಟಕಕ್ಕೆ ಬರಲು ಕಾರಣ?
ಕಲಾಕ್ಷೇತ್ರವೊಂದರಲ್ಲಿ ನಾಟಕ ನಡೆಯುತ್ತಿತ್ತು. ಪ್ರವೇಶ ಉಚಿತ. ಕಾರ್ಯಕ್ರಮ ಸಂಯೋಜಕರು ಹೊರಗೆ ಒಂದು ಪುಸ್ತಕ ಇಟ್ಟು ನೀವು ಈ ನಾಟಕಕ್ಕೆ ಬರಲು ಕಾರಣ ಏನು? ಎಂಬ ಪ್ರಶ್ನೆ ಕೇಳಿ ವೀಕ್ಷಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಮಹಿಳೆಯೊಬ್ಬರು ಆ ಪ್ರಶ್ನೆಗೆ ಹೀಗೆ ಉತ್ತರ ಬರೆದಿದ್ದರು. ಹೊರಗೆ ಜೋರು ಮಳೆ ಬರುತ್ತಿತ್ತು. ಹೀಗಾಗಿ ವಿಧಿ ಇಲ್ಲದೆ ಒಳಗೆ ಬಂದೆ.
ನಗಲು ಅವಕಾಶವನ್ನೇ ಕೊಡಲ್ಲ!
ಮೀನಳಿಗೆ ಮದುವೆ ಫಿಕ್ಸ್ ಆಗಿತ್ತು. ಆಕೆಯ ಗೆಳತಿ ಹೇಳಿದಳು. ಹುಡುಗ ಚೆನ್ನಾಗೇನೋ ಇದ್ದಾನೆ ಕಣೆ. ಆದರೆ, ಅವನು ನಕ್ಕರೆ ಮಾತ್ರ ಆ ಉಬ್ಬಹಲ್ಲು ಕೆಟ್ಟದಾಗಿ ಕಾಣತ್ತೆ. ಮೀನ ಹೇಳಿದ್ಲು. ಪರ್ವಾಗಿಲ್ಲ ಬಿಡು ಮದುವೆ ಆದ್ ಮೇಲೆ ನಾನು ಅವನಿಗೆ ನಗಲು ಅವಕಾಶವನ್ನೇ ನೀಡಲ್ಲ.
ದೀರ್ಘ ಸೇವೆಯ ರಹಸ್ಯ
ಒಂದು ದಿನ ಗುಂಡ ತನ್ನ ಅಂಗಡಿ ಮಾಲಿಕನಿಗೆ ಕೇಳಿದ. ಸಾರ್ ನಾನು ಕಳೆದ ೨೦ ವರ್ಷದಿಂದ ನಿಮ್ಮ ಅಂಗಡೀಲಿ ನಿಷ್ಠೆಯಿಂದ ಕೆಲಸ ಮಾಡ್ತಾ ಇದ್ದೀನಿ. ಎಂದಾದ್ರೂ ಸಂಬಳ ಜಾಸ್ತಿ ಮಾಡಿ ಅಂತ ಕೇಳಿದೀನಾ.. ಈಗ.... ಎಂದು ತೊದಲಿದ.
ಮಾಲಿಕ ಅಂದ ನೀನು ಸಂಬಳ ಜಾಸ್ತಿ ಕೇಳ್ದೇ ಇರೋದಕ್ಕೇ ಇಷ್ಟು ದಿನ ಇಲ್ಲಿ ಕೆಲಸ ಮಾಡ್ತಾ ಇರೋದು
ಪೆದ್ದ ಗುಂಡನ ತರ್ಕ
ಪೆದ್ದ ಗುಂಡ ಸ್ಟ್ರೀಟ್ ಲೈಟ್ ಕೆಳಗೆ ಏನೋ ಹುಡುಕುತ್ತಿದ್ದ. ಅದನ್ನು ನೋಡಿದ ಪಾದಚಾರಿಯೊಬ್ಬರು ಕೇಳಿದರು. ಏನು ಸ್ವಾಮಿ ಏನು ಹುಡುಕುತ್ತಿದ್ದೀರಿ. ಗುಂಡ ಹೇಳಿದ ಪಕ್ಕದ ಬೀದೀಲಿ ನನ್ನ ಪರ್ಸ್ ಬಿದ್ದು ಹೋಯ್ತು ಅದನ್ನು ಇಲ್ಲಿ ಹುಡುಕುತ್ತಿದ್ದೇನೆ. ಪಾದಚಾರಿ ಹೇಳಿದ್ರು. ಅಲ್ರೀ ಪಕ್ಕದ ಬೀದಿಲಿ ಪರ್ಸ್ ಬಿದ್ರೆ. ಇಲ್ಲಿ ಹುಡುಕುದ್ರೆ ಸಿಗತ್ತಾ... ಗುಂಡ ಹೇಳ್ದ ನನ್ನನ್ನೇನು ಅಷ್ಟು ದಡ್ಡ ಅಂದು ಕಂಡ್ರ. ಪಕ್ಕದ ಬೀದಿಲಿ ಕರೆಂಟೇ ಇಲ್ಲ. ಕತ್ತಲಲ್ಲಿ ಬಿದ್ದಿರೋದು ಸಿಗತ್ತಾ... ಅದಕ್ಕೆ ಲೈಟ್ ಇರೋಕಡೆ ಹುಡುಕುತ್ತಿದ್ದೇನೆ.
ಮಾರಾಟ
ಒಬ್ಬಾಕೆ. ತನ್ನ ಮೃತ ಪತಿಯ ಬೆನ್ಜ್ ಕಾರನ್ನು ಕೇವಲ ೧ ರುಪಾಯಿಗೆ ಮಾರಾಟ ಮಾಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದಳು. ಇದನ್ನು ನೋಡಿದ ಹಿತೈಷಿಗಳು ಕೇಳಿದರು. ಅಲ್ಲಾ ಮೇಡಂ ಈ ಕಾರನ್ನು ಕಳ್ಳನಿಗೆ ಕೊಟ್ಟರೂ ಒಂದು ಲಕ್ಷಾಂತರ ರುಪಾಯಿ ಕೊಡ್ತಾನೆ. ಅಂತಹುದರಲ್ಲಿ ಬರಿ ೧ ರುಪಾಯಿಗೆ ಏಕೆ ಮಾರುತ್ತಾ ಇದ್ದೀರಿ?
ಆಕೆ ಉತ್ತರಿಸಿದಳು: ಏನು ಮಾಡ್ಲೀ ಹೇಳಿ. ನನ್ನ ಗಂಡ ವಿಲ್ನಲ್ಲಿ ಈ ಕಾರನ್ನು ಮಾರಿ, ಬರುವ ಹಣವನ್ನು ಅವರ ಲೇಡಿ ಸೆಕ್ರೇಟರಿಗೆ ಕೊಡಲು ಹೇಳಿದ್ದಾರೆ.
ಅಭ್ಯಾಸ ಬಲ
ಬಿಟಿಎಸ್ ಬಸ್ ಡ್ರೈವರ್ ಆಗಿದ್ದ ಗುಂಡ, ಕಷ್ಟ ಪಟ್ಟು ಟ್ರೈನಿಂಗ್ ಮಾಡಿ ಪೈಲಟ್ ಆಗೇ ಬಿಟ್ಟ. ಒಂದು ದಿನ ವಿಮಾನ ಓಡಿಸುತ್ತಿರುವ ಇದ್ದಕ್ಕಿದ್ದ ಹಾಗೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಅಭ್ಯಾಸ ಬಲದಂತೆ ಗುಂಡ ಹೇಳ್ದ, ರೀ ಎಲ್ಲ ಕೆಳಗೆ ಇಳಿದು ಸ್ವಲ್ಪ ದೂರ ತಳ್ಳಿ.. ಎಂಜಿನ್ ಆಫ್ ಆಗಿದೆ
1. ಸ್ತ್ರೀ, ಒಂದು ಮಗುವಿಗೆ ಜನ್ಮವಿತ್ತರೆ ಕಂಗ್ರಾಜ್ಯುಲೇಶನ್ಸ್ ಸಿಗುತ್ತೆ.
ಮದುವೆಯಾದರೆ ಉಡುಗೊರೆಗಳು ಸಿಗುತ್ತವೆ.
ಗಂಡ ತೀರಿಹೋದ್ರೆ ಇನ್ಸ್ಯೂರೆನ್ಸ್ ಸಿಗುತ್ತೆ.
ಆದ್ರೂ ಈ ಹೆಂಗಸ್ರೂ ನಮಗೆ ಅದಿಲ್ಲ, ಇದಿಲ್ಲ ಅಂತ ಕೊರಗ್ತಿರ್ತಾರೆ.
2. ಹುಡುಗಃ ನಾವಿಬ್ರೂ ಓಡಿಹೋಗೋಣ್ವ..?
ಹುಡುಗಿಃ ನಂಗೆ ಒಬ್ಬಳೇ ಬರೋಕೆ ಭಯ ಆಗುತ್ತೆ.
ಹುಡುಗಃ ಹಾಗಾದ್ರೆ ಜೊತೆಗೆ ನಿನ್ನ ತಂಗೀನೂ ಕರ್ಕೋಂಡು ಬಾ.
3. ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲೂ ನಗುವವನಿಗೆ ' ಮದುವೆ ಗಂಡು " ಎನ್ನಬಹುದು.
4. ಹೆಣ್ಣು ಗಂಡಿಗಿರುವ ವ್ಯತ್ಯಾಸ;
ಹೆಣ್ಣು ಗಂಡ ಸಿಗೋವರೆಗೂ ಭವಿಷ್ಯದ ಬಗ್ಗೆ ಯೋಚಿಸುತ್ತಾಳೆ.
ಗಂಡು ಹೆಂಡ್ತಿ ಸಿಕ್ಕಿದ ಮೇಲೆ ಭವಿಷ್ಯದ ಬಗ್ಗೆ ಯೋಚಿಸುತ್ತಾನೆ.
5. ಮುದಿಸೊಳ್ಳೆಃ ಮಗೂ... ನಮ್ಮ ಕಾಲದಲ್ಲಿ ರಕ್ತ ಕುಡಿಬೇಕಾದ್ರೆ ಎಷ್ಟು ಕಷ್ಟ ಆಗ್ತಿತ್ತು ಗೊತ್ತಾ.
ಮೊಮ್ಮಗ ಸೊಳ್ಳೆಃ ಯಾಕೆ.. ತಾತ..?
ಮುದಿಸೊಳ್ಳೆಃ ಆವಾಗ ಹುಡುಗೀರು ಮೈ ತುಂಬಾ ಬಟ್ಟೆ ಹಾಕ್ಕೋತಾ ಇದ್ರು.
6. ಗುಂಡ ಹೋಟೆಲ್ ಮ್ಯಾನೇಜರ್ ಗೆ; ನನ್ನ ಹೆಂಡ್ತಿ ಕಿಟಕಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ ಬೇಗ ಬಾ..
ಹೋಟೇಲ್ ಮ್ಯಾನೇಜರ್ ; ಸಾರ್ ಅದಕ್ಕೆ ನಾನೇನ್ ಮಾಡ್ಲಿ..?
ಗುಂಡ. ; ಅಯ್ಯೋ ಕಿಟಕಿ Open ಆಗ್ತಿಲ್ಲ, ಸ್ವಲ್ಪ ಹೆಲ್ಪ್ ಮಾಡು ಬಾರಯ್ಯ.
7. ಅಂದು ಸಿದ್ದಾರ್ಥನು ಮನೆ ಬಿಟ್ಟು ಹೋದನು ತನ್ನ ಮನ ಶಾಂತಿಗಾಗಿ
ಇಂದು ಸಿದ್ದಾರ್ಥನು ಮನೆ ಬಿಟ್ಟು ಹೋದನು ಪಕ್ಕದ ಮನೆ ಶಾಂತಿಗಾಗಿ.
8. ಬಾಸ್ ; ಯಾಕೋ ನಾಣಿ ಆಫೀಸಿಗೆ ಲೇಟು.
ನಾಣಿ ; ಹೆಂಡ್ತಿಗೆ ಅಡುಗೆ ಮಾಡಿಟ್ಟು ಬರೋದಕ್ಕೆ ಸ್ವಲ್ಪ ಲೇಟಾಯಿತು ಸಾರ್.
ಬಾಸ್ ; ಈಡಿಯೇಟ್ ಸುಳ್ಳು ಹೇಳಬೇಡ, ನಾನು ಅಡುಗೆ ಮಾಡಿ, ಜೊತೆಗೆ ಪಾತ್ರೆ ತೊಳೆದು ಕರೆಕ್ಟ್ ಟೈಮಿಗೆ ಆಫೀಸಿಗೆ ಬರೋಲ್ವ..!!
9. ನನ್ನಲ್ಲೊಂದು ಕ್ಯಾಮೆರಾ ಇದ್ದಿದ್ರೆ ನಿನ್ನ ಪ್ರತಿಯೊಂದು ಚಲನವಲನಗಳನ್ನು ಕ್ಲಿಕ್ಕಿಸುತ್ತಿದ್ದೆ.
ಆ ಮೋಹಕ ನಗೆ.. ಮುದ್ದು ಮೊಗ ಎಲ್ಲವನ್ನೂ ಕ್ಲಿಕ್ಕಿಸಿ ನನ್ನ ಕಿಚನ್ ನಲ್ಲಿ ಅಂಟಿಸಿ.......
!
ಕಿಚನ್ ನಲ್ಲಿರೋ ಜಿರಲೆ ಮತ್ತು ಇಲಿಗಳನ್ನು ಭಯಪಡಿಸುತ್ತಿದ್ದೆ.
10. ಬಿಕ್ಷುಕಃ ಅಮ್ಮಾ.. ಒಂದು ರೂಪಾಯಿ ಬಿಕ್ಷೆ ಹಾಕಮ್ಮ.
ಆಕೆಃ ಲೋ ಹೀಗೆ ರೋಡ್ ನಲ್ಲಿ ನಿಂತು ಬಿಕ್ಷ ಕೇಳೋಕೆ ನಾಚ್ಗೆ ಆಗೋಲ್ವ..?
ಬಿಕ್ಷುಕ್ಷಃ ಹೋಗಮ್ಮ.. ನೀನು ಕೊಡೋ ಒಂದು ರೂಪಾಯಿಗೆ ನಾನು ಆಫೀಸ್ ನಲ್ಲಿ ಕೂತ್ಕೋಬೇಕಾ..?
ಕಿಲಾಡಿ ಮಗು....
ಒಂದು ಮಗು ತಾಯಿಯೊಂದಿಗೆ ಅಂಗಡಿಗೆ ಹೋಯ್ತು. ಅಂಗಡಿಯವನಿಗೆ ಈ ಮುದ್ದು ಮಗುವನ್ನು ನೋಡಿ ಖುಷಿ ಆಯ್ತು.
ಒಂದು ಜಾರಲ್ಲಿದ್ದ ಸಿಹಿ ತಿಂಡಿಯನ್ನು ತೋರಿಸಿ "ಮಗು ನಿಂಗೆ ಎಷ್ಟು ಬೇಕೋ ಅಷ್ಟು ತಗೋ" ಅಂದ. ಆದರೆ ಮಗು ತೆಗೆದುಕೊಳ್ಳಲಿಲ್ಲ. ಅಂಗಡಿಯವನಿಗೆ ಆಶ್ಚರ್ಯ ಆಯ್ತು. ಇಷ್ಟು ಚಿಕ್ಕ ಮಗು ಆದ್ರೂ ಸಿಹಿಯನ್ನು ತಗೊತ್ತಾ ಇಲ್ಲ!! ಮತ್ತೆ ಹೇಳಿದ ಮಗು ತಗೋ ಅಂತಾ...
ತಾಯಿಗೂ ಇದು ಕೇಳಿಸಿತು. ಅವಳೂ ಸಹ ಹೇಳಿದಳು. "ತಗೋ ಪುಟ್ಟಾ"ಅಂತಾ!!! ಉಹೂಂ ಮಗು ತೆಗೆದುಕೊಳ್ಳುತ್ತಾನೇ ಇಲ್ಲ.
ಅಂಗಡಿಯವವನೇ ಮಗು ತೆಗೆದು ಕೊಳ್ಳುತ್ತಾ ಇಲ್ಲ ಎಂದು ಅವನೇ ಕೈಯಲ್ಲಿ ಒಂದಿಷ್ಟು ಸಿಹಿ ಕೈಯಲ್ಲಿ ಹಿಡಿದು ಮಗುವಿಗೆ ಕೊಟ್ಟ!! ಆಗ ಮಗು ಖುಷಿಯಿಂದ ತೆಗೆದುಕೊಂಡಿತು!!
ಮನೆಗೆ ಹೋಗುವಾಗ ತಾಯಿ ಕೇಳಿದಳು... "ಅವರೇ ಹೇಳಿದಾಗ ಯಾಕೆ ತಗೊಳ್ಳಲಿಲ್ಲ?"
ಆಗ ಮಗು ಹೇಳಿತು ಅಮ್ಮಾ ನನ್ನ ಕೈ ನೋಡು ಎಷ್ಟು ಚಿಕ್ಕದು ಅಂತಾ. ನಾನು ತೆಗೆದುಕೊಂಡಿದ್ದರೆ ಜಾಸ್ತಿ ಬರುತ್ತಿರಲಿಲ್ಲ. ಅಂಕಲ್ ಅವರು ತಮ್ಮ ದೊಡ್ಡ ಕೈಯಲ್ಲಿ ಹೆಚ್ಚು ಕೊಟ್ಟರು!!
ನೀತಿಃ ನಾವು ತೆಗೆದುಕೊಂಡಾಗ ಕಡಿಮೆ ಸಿಗಬಹುದು. ಆದರೆ ದೇವರು ನಮ್ಮ ಬಯಕೆಗಿಂತಲೂ ಹೆಚ್ಚು ಕೊಡುತ್ತಾನೆ. ನಮ್ಮ ಕೈಯಲ್ಲಿ ಹಿಡಿದಿಡಲಾರದಷ್ಟು!
ಮೊದಲ ಪರಿಣಾಮ ಗಂಡನಿಗೆ
ವಿದೇಶಿ-- ನಿಮ್ಮ ದೇಶದಲ್ಲಿ ಮೊದಲು ಗಂಡನಿಗೆ ಉಣಬಡಿಸಿ ನಂತರ
ಹೆಂಡತಿ ಉಣ್ಣುತ್ತಾಳೆ ಯಾಕೆ?
ಭಾರತೀಯ-- ಒಂದು ವೇಳೆ ಅಡುಗೆಯಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ,
ಅದರ ಮೊದಲ ಪರಿಣಾಮ ಗಂಡನಿಗೆ ಆಗಲೆಂದು ಅದಕ್ಕೆ.
ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ
ಕಂಠಮಟ್ಟ ಕಡಿದ ಕುಡುಕನೊಬ್ಬ ತೂರಾಡಿಕೊಂಡು
ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ
ಸಜ್ಜನನೊಬ್ಬನು ಅವನನ್ನು ತಡೆದು,
ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಕೇಳಿದ.
ಆತನನ್ನೇ ಮೇಲಿಂದ ಕೆಳ ತನಕ ನೋಡಿದ ಕುಡುಕನು
ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ ಕೇಳಲು ಎಂದ.
ಆಶ್ಚರ್ಯದಿಂದ ಸಜ್ಜನನು ಹೌದಾ ಎಲ್ಲಿ ಎಂದು ಕೇಳಿದಾಗ
ನನ್ನ ಮನೆಯಲ್ಲಿ ಹೆಂಡತಿಯಿಂದ ಎಂದು ಉತ್ತರಿಸಿ
ತೂರಾಡಿಕೊಂಡೇ ಮುನ್ನಡೆದ.
ಪ್ರೀತಿ ಕಡಿಮೆ ಆಗ್ತಾ ಇದೆ
ರಮಾ-- ಬರ್ತಾ ಬರ್ತಾ ನನ್ನ ಗಂಡನಿಗೆ
ನನ್ನ ಮೇಲೆ ಪ್ರೀತಿ ಕಡಿಮೆ ಆಗ್ತಾ ಇದೆ.
ಉಮಾ-- ಹೇಗೆ ಹೇಳುತ್ತಿ?
ರಮಾ-- ಮೊದಲೆಲ್ಲ ಕಾಫಿ ತಗೊಂಡು ಬಂದು ನನ್ನನ್ನು ಎಬ್ಬಿಸ್ತಿದ್ರು,
ಈಗೇನಪ್ಪ ಅಂದರೆ ಎಬ್ಬಿಸಿ ಕಾಫಿ ಮಾಡು ಅಂತಾರೆ."
ಪಂಚರ್ ಆಗಿದೆ .
ಡ್ರೈವರ್ ; ಸರ್ ಕಾರ್ ಮುಂದಕ್ಕೆ ಹೋಗಲ್ಲ ಪಂಚರ್ ಆಗಿದೆ .
ಸರ್ದಾರ್ಜಿ : ಸರಿ ಹಿಂದಕ್ಕೆ ತಗೋ ಮನೆಗೆ ಹೋಗೋಣ .
ಒಹ್ ಅತ್ತೆ ಮಾವ
ಹೆಂಡತಿ ; (ಮನೆ ಹೊರಗೆ ೨ ಮಂಗ ಇರೋದನ್ನು ನೋಡಿ ) ರೀ ನಿಮ್ ನೆಂಟರು ಬಂದಿದಾರೆ ಹೋಗಿ ಮಾತನಾಡಿಸಿ.
ಗಂಡ ; ಬಾಗಿಲು ತೆರೆದು) ಒಹ್ ಅತ್ತೆ ಮಾವ ಯಾವಾಗ ಬಂದ್ರಿ?ಒಳಗೆ ಬನ್ನಿ.....
30 ವರ್ಷ ಅನುಭವ 
ಸಂದರ್ಶಕ: 20 ವರ್ಷ ವಯಸ್ಸಿನ ನೀನು 30 ವರ್ಷ ಅನುಭವ ಎಂದು ಹಾಕಿದ್ದೀಯಲ್ಲ?
ಅಭ್ಯರ್ಥಿ: ಓವರ್ ಟೈಮ್ ಮಾಡುತ್ತಿದ್ದೆ.
ಮರ್ಯಾದೆ
ಮಗು ; ಅಪ್ಪ ಇಲ್ಲಿ ಬಾ.
ಅಮ್ಮ: ಈ ತರ ಎಲ್ಲ ಅಪ್ಪನನ್ನು ಕರೆಯ ಬಾರದು ಮರ್ಯಾದೆ ಇಂದ ಕರಿಬೇಕು
ಮಗು : ಅಪ್ಪ ಮರ್ಯಾದೆ ಇಂದ ಇಲ್ಲಿ ಬಾ
ದೇವದಾಸ್ ಆಗ್ತಾರೆ ಯಾಕೆ 
ಹುಡುಗರು ದೇವದಾಸ್ ಆಗ್ತಾರೆ ಯಾಕೆ ?
ಹುಡುಗಿಗಾಗಿ.
ಅವಳ ಅಂದಕ್ಕಾಗಿ.
ಮನಸಿಗಾಗಿ.
ಪ್ರೀತಿಗಾಗಿ.
ಇವು ಯಾವುದಕ್ಕೂ ಅಲ್ಲ ಹುಡುಗಿ ಗೋಸ್ಕರ ಮಾಡಿದ ಸಾಲಕ್ಕಾಗಿ.
ಡ್ರೈವಿಂಗ್ ಸಂಬಳ 
ಬಾಸ್: ನನಗೆ ಒಬ್ಬ ಡ್ರೈವರ್ ಬೇಕು starting
ಸಂಬಳ ೩೦೦೦ ಕೊಡ್ತೀನಿ
ಗುಂಡ: ಏನ್ ಗ್ರೇಟ್ ಸರ್ ನೀವು starting ೩೦೦೦ ಕೊಟ್ರೆ ಡ್ರೈವಿಂಗ್ ಸಂಬಳ ಎಷ್ಟು?
ಗ್ರೌಂಡ್ ಫ್ಲೋರ್ ನಲ್ಲೆ ಇರೋದು
ಸರ್ದಾರ್ ಬಸ್ ಸ್ಟಾಪ್ ನಲ್ಲಿ ಕಾಯ್ತಾ ಇದ್ದ
ಒಬ್ಬ ಬೈಕ್ ನಲ್ಲಿ ಬಂದ.
ಮ್ಯಾನ್ : ಲಿಫ್ಟ್ ಬೇಕ?
ಸರ್ದಾರ್ : ಬೇಡ ನಮ್ಮ ಮನೆ ಗ್ರೌಂಡ್ ಫ್ಲೋರ್ ನಲ್ಲೆ ಇರೋದು.
75 kg ಸರ್ 
ಸರ್ದಾರ್ ; ನಾನು ಒಳಗೆ ಬರಬಹುದ ಸರ್
ಇಂಟರ್ ವ್ಯೂ ಆಫೀಸರ್ ; ವೈಟ್ ಪ್ಲೀಸ್
ಸರ್ದಾರ್ ; 75 kg ಸರ್
ಮನೆಗೆ ಬರಬೇಕೆಂದು 
ಗುಂಡನ ಊರಿಗೆ ಸ್ವಾಮೀಜಿಯೊಬ್ರು ಬಂದಿದ್ದರು. ಅವರು ಜನರಿಗೆ ಭೋಧಿಸತ್ತಾ "ಯಾರು ಸ್ವರ್ಗಕ್ಕೆ ಹೋಗಲು ಇಷ್ಟಪಡುತ್ತೀರಿ?" ಎಂದು ಕೇಳಿದರು . ಗುಂಡನೊಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಕೈ ಎತ್ತಿದರು.
ಆಗ ಸ್ವಾಮೀಜಿ ಕೇಳಿದರು "ಯಾಕೆ ಗುಂಡ , ನಿಮಗೆ ಸ್ವರ್ಗಕ್ಕೆ ಹೋಗಲು ಇಷ್ಟವಿಲ್ಲವೆ? "
ಗುಂಡ :ಹೇಳಿದ .ಹಾಗಲ್ಲ ಸ್ವಾಮೀಜಿ, ಕೀರ್ತನೆ ಮುಗಿದ ಕೂಡಲೇ ಮನೆಗೆ ಬರಬೇಕೆಂದು ನನ್ನ ಹೆಂಡತಿ ಹೇಳಿದ್ದಾಳೆ."

No comments: