Sunday, July 25, 2010

ಹಾಸ್ಯ (ಸುಮ್ಮನೆ ನಕ್ಕುಬಿಡಿ )2

ಸರ್ವೀಸ್ ಸೆಂಟರ್   
ಸಂತಾ-ಬಂತಾ ಒಂದು ಸರ್ವೀಸ್ ಸೆಂಟರ್ ಶುರು ಮಾಡಿದರು. ಅದು ಆರಂಭವಾಗಿ ಮೂರು ತಿಂಗಳಾದರೂ, ಒಂದೇ ಒಂದು ವಾಹನ ಸಹಾ ಬರಲಿಲ್ಲ... ಯಾಕೆಂದರೆ, ಆ ಸರ್ವೀಸ್ ಸೆಂಟರ್ 5ನೇ ಫ್ಲೋರ್ನಲ್ಲಿತ್ತು..
ಕೊಟ್ಟ ಮಾತು
ಸಂತಾ: ಏನಯ್ಯಾ, ವಿಸ್ಕೀನ ಪೈಪ್ ಹಾಕ್ಕೊಂಡು ಕುಡೀತಾ ಇದ್ದೀಯಲ್ಲ ಯಾಕೆ? 
ಬಂತಾ: ಹೌದು ಕಣೋ. ವಿಸ್ಕೀನ ಕೈಯಿಂದ ಮುಟ್ಟೋದಿಲ್ಲ ಅಂತ ನನ್ನ ಹೆಂಡತಿಗೆ ಮಾತು ಕೊಟ್ಟಿದ್ದೇನೆ...
ಶತಮೂರ್ಖರು   
ಸಂತಾ: ನಾನು ಇನ್ನು ಫಸ್ಟ್ ಶೋ ಸಿನಿಮಾ ಮಾತ್ರ ನೋಡ್ತೇನೆ. ಆ ಹೀರೋ, ಮ್ಯಾಟಿನಿಯಲ್ಲಿ ಸರಿಯಾಗಿ ಫೈಟೇ ಮಾಡಲ್ಲ. ಅವನಿಗೆ ಸುಸ್ತಾಗಿರುತ್ತೆ ಅಂತ ಕಾಣುತ್ತೆ.
ಬಂತಾ: ನಿನ್ನಂಥವರಿಂದಲೇ ನಮ್ಮ ಕುಲಕ್ಕೆ ಮೂರ್ಖರು ಅಂತ ಹೆಸರು ಬಂದಿರೋದು. ಯಾವಾಗ್ಲೂ ಮ್ಯಾಟಿನೀಲೇ ಹೀರೋ ಚೆನ್ನಾಗಿ ಫೈಟ್ ಮಾಡೋದು. ಯಾಕೆಂದ್ರೆ ಅವನಿಗೆ ಫಸ್ಟ್ ಶೋದಲ್ಲಿ ಪ್ರಾಕ್ಟೀಸ್ ಆಗಿರುತ್ತೆ...!
ಜೋಕ್ಸ್: ಯಾವತ್ತೂ ಸ್ಕೂಲಿಗೆ ಹೋಗದ ಕಿಡ್ನಿ ನಪಾಸು
ಒಮ್ಮೆ ತಿಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಡಾಕ್ಟರ್ ಬಳಿಗೆ ಹೋಗುತ್ತಾನೆ,

ಡಾಕ್ಟರ್: ನಿನ್ನ ಅನಾರೋಗ್ಯಕ್ಕೆ ಕಾರಣ ಕಿಡ್ನಿ ಫೇಲ್ ಆಗಿರುವುದೇ...!!!
ತಿಮ್ಮ: ಏನ್ಮಾತಾಡ್ತಾ ಇದ್ದೀರಾ ಸಾರ್... ನನ್ನ ಕಿಡ್ನಿ ಯಾವತ್ತೂ ಸ್ಕೂಲಿಗೇ ಹೋಗಿಲ್ಲ ಅದೆಂಗ್ ಫೇಲ್ ಆಗುತ್ತದೆ.
ಒಮ್ಮೆ ಗುಂಡ ಮತ್ತು ತಿಮ್ಮ ಪುರಾತನ ವಸ್ತು ಸಂಗ್ರಹಾಲಯಕ್ಕೆ ಹೋಗುತ್ತಾರೆ. ಅಲ್ಲಿ ಈಜಿಪ್ಟ್ ಮಮ್ಮಿಯನ್ನು ನೋಡಿ
ಗುಂಡ: ಡೌಟೇ ಇಲ್ಲ ಇದಕ್ಕೆ ಇಷ್ಟು ಬ್ಯಾಂಡೇಜ್ ಸುತ್ತಿದ್ದಾರೆಂದರೆ ಖಚಿತವಾಗಿ ಇದು ಲಾರಿ ಆಕ್ಸಿಡೆಂಟ್ ಕೇಸೇ ಆಗಿರಬೇಕು ಎಂದು ಆಶ್ಚರ್ಯ ವ್ಯಕ್ತಪಡಿಸಿದ.
ತಿಮ್ಮ: ನೀನೇಳೋದು ಕರೆಕ್ಟ್ ಕಣೋ. ಆಕ್ಸಿಡೆಂಟ್ ಮಾಡಿದ ಲಾರಿ ನಂಬರ್ BC 1760 ಅಂತಲೂ ಬರೆದಿದ್ದಾರೆ ಎಂದ.

ಅತ್ತೆ : ನೋಡಮ್ಮಾ ಅಕ್ಕಿಯನ್ನು ಚೆನ್ನಾಗಿ ತೊಳೆದು ಸ್ಟೌವ್ ಮೇಲೆ ಇಡು.
ಸೊಸೆ: ಅಕ್ಕಿ ಯಾವ ಸೋಪಲ್ಲಿ ತೊಳೆಯ ಬೇಕು ಅತ್ತೆ...?
ಅತ್ತೆ : ಆಂ...ಎಂದವಳೆ ಇಂತ ಸೊಸೆ ಸಿಕ್ಕ ಸೌಭಾಗ್ಯಕ್ಕೆ ತಲೆ ಮೇಲೆ ಕೈಹೊತ್ತಿ ಕುಳಿತಳು.
ಆಕ್ಸಿಡೆಂಟ್ 
ಸರ್ದಾರ್ಜಿಗಳು ಪ್ರಯಾಣಿಸುತ್ತಿದ್ದ ಬಸ್ ಆಕ್ಸಿಡೆಂಟ್ ಆಗಿ ಅನೇಕ ಮಂದಿಗೆ ಗಾಯಗಳಾಗಿದ್ದವು. ಒಬ್ಬ ಸರ್ದಾರ್ಜಿ ತನ್ನ ಕೈ ತುಂಡಾಯಿತೆಂದು ಅಳುತ್ತಿದ್ದ. 
ಆಗ, ಇನ್ನೊಬ್ಬ ಸರ್ದಾರ್ಜಿ, ನೋಡು ಅಲ್ಲೊಬ್ಬಂದು ತಲೆಯೇ ತುಂಡಾಗಿದೆ ಆದರೂ ಆತ ಅಳುತ್ತಿಲ್ಲ ಅದಕ್ಕಿಂತ ದೊಡ್ಡದು ಇನ್ನೇನಿದೆ ಎಂದಾಗ ಸರ್ದಾರ್ಜಿ ಅಳು ನಿಲ್ಲಿಸಿದ.
ಜೋಕ್ಸ್
ಮಗು: ಅಮ್ಮ ಪರೀಕ್ಷೆಗೆ ಎಲ್ಲ ತಯಾರಿ ಆಯಿತು ಒಂದು ತಯಾರಿ ಮಾತ್ರ ಬಾಕಿ ಇದೆ
ಅಮ್ಮ: ಯಾವ ತಯಾರಿ ?
ಮಗು : ಪರೀಕ್ಷೆಗೆ ಓದುವುದು
ಅಮ್ಮ:??
ಸರ್ದಾರ್ ಜೋಕ್ಸ್
ಸರ್ದಾರ್ : ಈ ಕಥೆ ಪುಸ್ತಕ ಓದುವುದಕ್ಕೆ ತುಂಬಾ ಬೇಜಾರಾಗ್ತಾಇದೆ ಸ್ವಾಮಿ.. ಮುನ್ನುಡಿಯಲ್ಲಿಯೇ ತುಂಬಾ ಪಾತ್ರಗಳು ಇರುವುದರಿಂದ ಸ್ವಲ್ಪ ನನಗೆ ತಲೆ ಕೆರೆದುಕೊಳ್ಳುವಹಾಗಿದೆ.
ಗ್ರಂಥಪಾಲಕ : "ಬಾರೋ.. ಬಾ... ರಿಜಿಸ್ಟರ್ ಬುಕ್ ತೆಗೆದುಕೊಂಡು ಹೋಗಿರುವ ಕಮಂಗಿ ನೀನೇನಾ...?!!!
ಒಂದು ದಿನ ಸರ್ದಾರ್ ಆಫೀಸ್ಗೆ ತುಸುಬೇಗನೆ ಹೊರಟಿದ್ದ. ಆತುರದಲ್ಲಿ ಹೋಗುತ್ತಿದ್ದ ಸರ್ದಾರ್ ಗೆ ಮಾರ್ಗ ಮಧ್ಯೆ ಹಸಿರು ಬಣ್ಣದ ಏನೋ ಒಂದನ್ನು ಕಂಡು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿಸಿ ಏನಿರಬಹುದು ಎಂದು ಯೋಚಿಸಿದ.
ಇದ್ದಕ್ಕಿದ್ದ ಹಾಗೆ ಏನೋ ಆದವನಂತೆ ಅದನ್ನು ಎಸೆದು... " ಚೀ.. ಸೆಗಣಿ... ಸದ್ಯ ತುಳಿಯಲಿಲ್ಲ..."
ಸರ್ದಾರ್ : ಮದುವೆಗೆ ಬಾ ಅಂತ ಪತ್ರ ಬರೆದಿದ್ರೂ ಯಾಕೆ ಬರಲಿಲ್ಲ...?
ಗುಂಡ : ನಿನ್ನ ಪತ್ರ ನನಗೆ ಸಿಗಲೇ ಇಲ್ಲ ಕಣೋ...
ಸರ್ದಾರ್ : ಅಯ್ಯೋ ಪೆದ್ದ.. ಪತ್ರ ಸಿಗದಿದ್ರು ಬಾ ಅಂತ ಬರೆದಿದ್ನಲ್ಲೋ ಮಾರಾಯ...!!!
ಆಫೀಸ್   
ಸಂತಾ: ಎಂ.ಜಿ.ರಸ್ತೆಯಲ್ಲಿ ನಿನ್ನ ಆಫೀಸ್ ಇದೆ ಅಂದೆಯಲ್ಲ ಎಷ್ಟು ದೊಡ್ಡದಿದೆ? 
ಬಂತಾ: ನೀನು ಏರೋಪ್ಲೇನ್ ನೋಡಿದ್ದೀಯಲ್ಲ?
ಸಂತಾ: ಓಹೋ..
ಬಂತಾ: ಏರೋಪ್ಲೇನ್ನಲ್ಲಿ ನಮ್ಮ ಲಗೇಜ್ ಇಟ್ಟುಕೊಳ್ಳೋಕೆ ತಲೆ ಮೇಲೆ ಬಾಕ್ಸ್ಗಳು ಮಾಡಿರ್ತಾರಲ್ಲ.. ಎರಡು ಬಾಕ್ಸ್ ಸೈಜ್ ಇದೆ ನಮ್ಮ ಆಫೀಸು..
ಹುಡುಗಿ:- ಈ ಅಡ್ರಸ್ ಎಲ್ಲಿ ಬರುತ್ತೆ ಅಂತಾ ಹೇಳ್ತೀರಾ...??
ಹಾಸ್ಯ
1 ) ೨೦) ನಿಮಗೆ 99% ಬೇಜಾರ್ ಆದ್ರೆ,
01% ಕೋಪ ಇದ್ರೆ,
29% ಸಂತೋಷ ಇದ್ರೆ,
16% ಕಷ್ಟ ಇದ್ರೆ,
78% ಭಯಾ ಇದ್ರೆ.....
ಈ ಎಲ್ಲಾ ನಂಬರ್ ಸೇರಿಸಿ ಇಂದು ಕಾಲ್ ಮಾಡಿ...
ಬೆಸ್ಟ್ ಫ್ರೆಂಡ್ ಸಿಗ್ತಾರೆ..
ಬೇಜಾನ್ ಮಾತಾಡಿ.....
2) ಲವ್ ಕ್ಲಿಕ್ ಆದ್ರೆ,
ಹುಡುಗ ಹುಡುಗಿ ದಿನಾ
PULSAR-DTS-i
ನಲ್ಲಿ ಊರ್ ತುಂಬಾ ರೌಂಡು....
ಹುಡುಗಿ ಕೈ ಕೊಟ್ರೆ...
ಹುಡುಗನ ಮನೆ ಮುಂದೆ
DTS ಎಫೆಕ್ಟ್ ನಲ್ಲಿ ತಮಟೆ ಸೌಂಡು.......

ನನ್ನ ಟೀಂ ಲೀಡರ್ ಪಾಂಡುರಂಗನ ಆಜ್ಞೆಯಂತೆ ನಿದ್ದೆ ಇಲ್ಲದೆ (ಏಕೆ ಎಂದು ತಿಳಿಯಬೇಕಾದರೆ ಓದಿ ಮನಸೂರೆಗೊಳ್ಳುವ ಮೈಸೂರು.... ) ಬಳ್ಳಾರಿ ತಲುಪಿಯಾಗಿತ್ತು. ಬರಿ ಸಿನಿಮಾದಲ್ಲಿ ಬಳ್ಳಾರಿಯ ಹೆಸರು ಕೇಳಿದ್ದೆ. ಯಾವುದಾದರು ದಕ್ಷ ಅಧಿಕಾರಿ ನ್ಯಾಯಕ್ಕಾಗಿ ಹೋರಾಡುವಾಗ. ಅವನನ್ನು ನೀರಿಲ್ಲದ ಊರಿಗೆ Transfer ಮಾಡಿ ಬಿಡುತ್ತೇನೆ ಎಂಬ ವಿಲನ್ ಉದ್ಗಾರ. ಇಲ್ಲವೊ ಬಳ್ಳಾರಿ ಜೈಲಿಗೆ ಕಳುಹಿಸಿಬಿಡುತ್ತೇನೆ ಎಂದು ವಿಲನ್ ಪೋಲಿಸ್ ಹೇಳುವ ಪರಿ ಸಿನಿಮಾದಲ್ಲಿ ನೋಡಿದ್ದೇ.
ತರ್ಲೆ ಮಂಜ(ಗ)ನ ಎದಿರೇಟು....
ಹಾಸ್ಯ
ಮಂಜನಿಗೆ ಎದಿರೇಟು ಕೊಡುವ ಏಕೈಕ ವ್ಯಕ್ತಿ ಎಂದರೆ ಮನೋಜ. ಕ್ರೀಡೆಯಲ್ಲಿ. ಜಿದ್ದಾ-ಜಿದ್ದಿನಲ್ಲಿ, ಮಂಜನಿಗೆ ಪ್ರತಿಸ್ಪರ್ಧಿ. ಆದರೆ ಓದಿನಲ್ಲಿ ಮಾತ್ರ ಶೂನ್ಯ. ಮಂಜನ ತರಲೆಗಳಿಗೆ ಇವನ ಆಟ ನಡೆಯುತ್ತಿದ್ದಿಲ್ಲ. ಯಾವದೇ ಸ್ಪರ್ಧೆ ಇರಲಿ ಮಂಜ ಭಾಗವಹಿಸಿದ ಎಂದರೆ ಮನೋಜ ಕೂಡ ಸ್ಪರ್ಧಿಸಲೇ ಬೇಕು. ಒಂದೇ ಕ್ಲಾಸಿನಲ್ಲಿ ಇದ್ದರು ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆದರು ಪರೀಕ್ಷೆಯಲ್ಲಿ ಮನೋಜನಿಗೆ ಸಹಾಯ ಮಾಡುತ್ತಿದ್ದ ಮಂಜ.
ತರ್ಲೆ ಮಂಜ(ಗ)ನ ಎದಿರೇಟು....
ಹಾಸ್ಯ
ಮಂಜನಿಗೆ ಎದಿರೇಟು ಕೊಡುವ ಏಕೈಕ ವ್ಯಕ್ತಿ ಎಂದರೆ ಮನೋಜ. ಕ್ರೀಡೆಯಲ್ಲಿ. ಜಿದ್ದಾ-ಜಿದ್ದಿನಲ್ಲಿ, ಮಂಜನಿಗೆ ಪ್ರತಿಸ್ಪರ್ಧಿ. ಆದರೆ ಓದಿನಲ್ಲಿ ಮಾತ್ರ ಶೂನ್ಯ. ಮಂಜನ ತರಲೆಗಳಿಗೆ ಇವನ ಆಟ ನಡೆಯುತ್ತಿದ್ದಿಲ್ಲ. ಯಾವದೇ ಸ್ಪರ್ಧೆ ಇರಲಿ ಮಂಜ ಭಾಗವಹಿಸಿದ ಎಂದರೆ ಮನೋಜ ಕೂಡ ಸ್ಪರ್ಧಿಸಲೇ ಬೇಕು. ಒಂದೇ ಕ್ಲಾಸಿನಲ್ಲಿ ಇದ್ದರು ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆದರು ಪರೀಕ್ಷೆಯಲ್ಲಿ ಮನೋಜನಿಗೆ ಸಹಾಯ ಮಾಡುತ್ತಿದ್ದ ಮಂಜ.
ರೇಟಿಂಗ್:
ತರ್ಲೆ ಮಂಜ(ಗ) ನಾಟ....ಭಾಗ 2
ಹಾಸ್ಯ
ಮಂಜ ಎಷ್ಟೇ ತರ್ಲೆ ಆದರು ತುಂಬಾ ಜಾಣ. ಪರೀಕ್ಷೇಲಿ ಮಾತ್ರ 100 ಕ್ಕೆ 90 ರ ಮೇಲೆಯೇ.. ತುಂಬಾ ವಿದ್ಯಾರ್ಥಿಗಳಿಗೆ ಪರೀಕ್ಷೇಲಿ ಪಾಸಾಗಲು ಸಹಾಯ ಮಾಡಿದ್ದಾನೆ. ಹಾಗೆಯೆ ಪ್ರೀತಿಸುವವರಿಗೂ ಸಹಾಯ ಮಾಡುತ್ತಿದ್ದ. ಪ್ರೇಮ ಪತ್ರ ಬರೆದು ಕೊಡುವದು, ಪ್ರೀತಿಯನ್ನು ಅವರ ಪ್ರೇಯಸಿಗೆ ಅರುಹುವದು ಹೀಗೆ ....
ಹುಡುಗೀನ ಮದ್ವೆ ಆಗೋ ಮಾರಯ
1970ರಲ್ಲಿ ಮಗಾ ನಮ್ಮ ಜಾತ್ತಿಯ ಹುಡುಗೀನ ಮದುವೆ ಆಗಪ್ಪಾ
1980ರಲ್ಲಿ ನಮ್ಮ ಧಮEದ ಹುಡುಗೀಯನ್ನೇ ಮದುವೆ ಆಗಯ್ಯಾ
1990ರಲ್ಲಿ ನಮ್ಮ ಅಂತಸ್ಸಿಗೆ ತಕ್ಕಂತಿರುವವಳನ್ನೆ ಮದುವೆ ಆಗಬೇಕು ಗೊತ್ತಾಯ್ತಾ
2009ರಲ್ಲಿ ಹುಡುಗೀನ ಮದ್ವೆ ಆಗೋ ಮಾರಯ
ತರ್ಲೆ ಮಂಜ(ಗ) ನಾಟ....
ಮೊನ್ನೆ ಮಂಜ ನಾನು ನಿನ್ನ ಜೊತೆ ಮನೆಗೆ ಬರುತ್ತೇನೆ ಎಂದು ಆಫೀಸ್ಗೆ ಫೋನ್ ಮಾಡಿದ್ದ. ಇವನ ಮಂಗನಾಟ ತಿಳಿದಿದ್ದರಿಂದ ನನಗೆ ಲೇಟ್ ಆಗುತ್ತೆ ನೀನು ಹೋಗು ಎಂದು ಹೇಳಿದೆ. ಅದಕ್ಕೆ ಅವನು "ಇವತ್ತು ನಿನಗೆ ಪಾನಿಪುರಿ ಮತ್ತು ಮಿರ್ಚಿ ತಿನ್ನಿಸುತ್ತೇನೆ ಎಂದು" ಆಸೆ ಹುಟ್ಟಿಸಿದ. ಮಂಜ ಎಷ್ಟೇ ತರ್ಲೆ ಇದ್ದರು ಅವನ ಜೊತೆ ಹೋದರೆ ಪಾನಿಪುರಿ ಗ್ಯಾರಂಟೀ. ಆದರು ಮನಸ್ಸಿನಲ್ಲಿ ಏನೋ ಒಂದು ದುಗುಡ.
ಆಯಿತು ಎಂದು ಹೊರಟೆವು. ಅವತ್ತು ಬಸ್ಸಿನಲ್ಲಿ ಕಾಲು ಇಡಲಿಕ್ಕು ಬಾರದಷ್ಟು ಜನ ಜಂಗುಳಿ ಇತ್ತು.
ಕಾಲ್ ಸೆಂಟರ್ ....
"ನಿನ್ನ ಜನ್ಮದಲ್ಲಿ ನೀನು PUC ಪಾಸಗಲ್ಲ ಕಣೋ " ಎಂದು ಶ್ರೀಧರರಾಯರು ಮಗ ಸುಬ್ಬನಿಗೆ ಉಗಿದಿದ್ದರು. ತ್ರಿವಿಕ್ರಮನಂತೆ ಸತತವಾಗಿ 6 ನೆ ಬಾರಿ ಸುಬ್ಬ PUC ಪರೀಕ್ಷೆ ಕಟ್ಟಿ ಫೇಲ್ ಆಗಿದ್ದ. ಮಾಡು ಇಲ್ಲವೇ ಮಡಿ ಎಂದು ಅಪ್ಪ ಕೊಟ್ಟ ಕಡೆಯ ಚಾನ್ಸ್ ಅದು ಕೂಡ ಕೈ ಕೊಟ್ಟಿತ್ತು. ಇಲ್ಲಿಯೇ ಏನಾದರು ನೌಕರಿ ಮಾಡು ಎಂದು ಅವನ ಅಪ್ಪ ತಾಕಿತ ಮಾಡಿದ್ದರು. ಸುಬ್ಬನಿಗೆ ಊರಲ್ಲಿ ಯಾರಿಗೂ ಮುಖ ತೋರಿಸುವ ಮನಸಿರಲಿಲ್ಲ. ತಂದೆಯ ಮಾತನ್ನು ಮೀರುವಂತಿಲ್ಲ.
ರೇಟಿಂಗ್:
ನಾಯಿ ಕಚ್ಚಿದ್ರೆ ಏನ್ ಮಾಡ್ತೀರಾ?
ಡಾಕ್ಟರ್: ನೀವು ಬುದ್ಧಿವಂತರೇ?
ಸರ್ದಾರ್ಜಿ: ಹೌದು.
ಡಾಕ್ಟರ್: ಹಂಗಾದ್ರೆ ನಿಮ್ಗೆ ಹಲ್ಲಿಲ್ಲದ ನಾಯಿ ಕಚ್ಚಿದ್ರೆ ಏನ್ ಮಾಡ್ತೀರಾ?
ಸರ್ದಾರ್ಜಿ: ನಾನು ಸೂಜಿ ಇಲ್ಲದ ಸಿರಿಂಜಿನಿಂದ ಇಂಜೆಕ್ಷನ್ ತಗೋತೀನಿ..
ರೇಟಿಂಗ್:
ನಾಳೆ ಮಾಡೋ ಕೆಲ್ಸಾನ ಇಂದೇ ಮಾಡ್ಬೇಕೂಂತ.
ಟೀಚರ್: ಯಾಕೋ ಸೋಮ, ನಿನ್ನೆ ಶಾಲೆಗೆ ಬಂದಿಲ್ಲ ನೀನು?
ಸೋಮ: ನಿನ್ನೆ ಪಿ಼ಲಮ್ಗೆ ಹೋಗಿದ್ದೆ ಮಿಸ್.
ಟೀಚರ್: ನಾಳೆ ಭಾನುವಾರ ಹೋಗಬಹುದಿತ್ತಲ್ವೇ?
ಸೋಮ: ನಾಳೇನೇ ಹೋಗೋಣ ಅಂತ ಯೋಚಿಸಿದ್ದೆ. ಆದ್ರೆ ನೀವೇ ಹೇಳಿದ್ರಲ್ವಾ ಮಿಸ್ ನಾಳೆ ಮಾಡೋ ಕೆಲ್ಸಾನ ಇಂದೇ ಮಾಡ್ಬೇಕೂಂತ.
ಗುಂಡ ಪರೀಕ್ಷೆಯಲ್ಲಿ
ನಮ್ಮ ಗುಂಡ ಪರೀಕ್ಷೆಯಲ್ಲಿ ಕೊಡುವ ಉತ್ತರ ಹೇಗಿರುತ್ತೆ? ಕೆಲವು ಸ್ಯಾಂಪಲ್ ಗಳು ಹೀಗಿವೆ....
ಪ್ರಶ್ನೆಃ ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು?
ಉತ್ತರಃ ಕುಳಿತುಕೊಂಡನು.
ಪ್ರಶ್ನೆಃ ಗಣಪತಿಯ ಕತೆಯಿಂದ ತಿಳಿಯಬೇಕಾದ ನೀತಿ ಏನು?
ಉತ್ತರಃ ಸ್ನಾನದ ಕೋಣೆಗೆ ಬಾಗಿಲು ಇರಬೇಕಾದದ್ದು ಅತೀ ಅವಶ್ಯ
ಪ್ರಶ್ನೆಃ ವಾಸ್ಕೋಡಿಗಾಮನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು?
ಉತ್ತರಃ ಏರಡನೇ ಹೆಜ್ಜೆ ಇಟ್ಟನು.
ಹಾಸ್ಯಗಳು
ಅಧ್ಯಾಪಕರು- ನಿನ್ನ ಮತ್ತು ನಿನ್ನ ತಂದೆಯ ಹೆಸರೇನು?
ವಿದ್ಯಾರ್ಥಿ- ನನ್ನ ಹೆಸರು ಸೂರ್ಯ ಪ್ರಕಾಶ, ನನ್ನ ತಂದೆಯ ಹೆಸರು ಬಾಲ ಜೀವನ ಸಾರ್.
ಅಧ್ಯಾಪಕರು- ಇದನ್ನೇ ಇಂಗ್ಲೀಷ್ನಲ್ಲಿ ಉತ್ತರಿಸು.
ವಿದ್ಯಾರ್ಥಿ- ಮೈ ನೇಮ್ ಇಸ್ 'ಸನ್ ಲೈಟ್' ಆಂಡ್ ಮೈ ಪಾಧರ್ ನೇಮ್ ಇಸ್ 'ಲೈಫ್ ಬಾಯ್'..! ಎಂದ."
ಅಡ್ಡ ಹೆಸರು
ಉತ್ತರ ಕರ್ನಾಟಕ ಯಾರದೆ ಮನೆಗೆ ಹೋಗಿ ಅಲ್ಲಿ ನಿಮಗಂತೂ ಮುಜಗುರ ಕಾದಿರುತ್ತೆ ನಿಮ್ಮ ಸ್ನೇಹಿತರನ್ನು ಭೇಟಿಯಾಗಲು ನೀವು ಬಂದಾಗ ಯಾರನ್ನೇ ಕೇಳಿ,ಹೆಸರು ಹೇಳಿದ ತಕ್ಷಣ ಆಡ್ಡ ಹೆಸರೆನ್ರಿ ಅಂತಾರೆ.ನೀವು ಬೆಣ್ಣಿಯವರ, ಮಜ್ಜಗಿ,ಬ್ಯಾಳಿ,ಬೆಲ್ಲದ, ಮೆಣಸಿನಕಾಯಿ, ಸಕ್ರಿ,ಮುಲಂಗಿ,ಆಡೀನ,ಚೋಳಿನ,ಕುರಿ, ನರಿ,ದೊಡ್ಡಮನಿ,ಸಣ್ಣಮನಿ,ನಡುವಿನಮನಿ,ಹಿತ್ತ್ಲಮನಿ,ಸಂದಿಮನಿಯಾಗಲಿ, ಉಳ್ಳಾಗಡ್ಡಿ,ಕೋತಂಬ್ರಿ,ಸೊಪ್ಪಿನ, ಉಪ್ಪಿನ ಆಗಲಿ ಮನೆ ದಾರಿ ತೋರಿಸ್ತಾರೆ.ಮನೆ ಬಾಗಲಿಗೆ ನಿಂತು ನೀವು ಎಮ್ಮಿಯವರ...ಎಮ್ಮಿಯವರನೋ, ಉಂಡಿಯವರ.ಉಂಡಿಯವರೊ ಎಂದಾಗ ಒಳಗಿನಿಂದ ಬಂದ ಯಜಮಾನ್ರು ಯಾರ ಬೇಕಿತ್ತರಿ? ಅಂದಾಗ ಎಮ್ಮಿಯವ್ರು ಬೇಕಿತ್ರಿ ಅಂತಿರಿ.
ಅಡ್ಡ ಹೆಸರು ಪ್ಲೀಸ್ ...............
ನಾನು, ನನ್ನ ಮಗ, ಮಡದಿ ಮತ್ತು ಅಮ್ಮನೊಂದಿಗೆ ಶೃಂಗೇರಿ,ಹೊರನಾಡು,ಧರ್ಮಸ್ಥಳಕ್ಕೆ ಪ್ರವಾಸ ಹೋಗಿದ್ದೆವು. ನನ್ನ ಮಗನಿಗೆ ಏನು ಅನ್ನಿಸಿತೋ ಗೊತ್ತಿಲ್ಲ. ಯಾವಾಗಲು "ಆ ಮನಿ..", "ಈ ಮನಿ" ಎಂದು ಸಂಭೋದಿಸುತ್ತಿದ್ದ. ಅವನು ಚಿಕ್ಕಮಗಳೂರಿನ ಎಸ್ಟೇಟ್ ಮನೆಗಳನ್ನು ನೋಡಿ ಹಾಗೆ ಅoದಿರಬಹುದು. ಮನಸ್ಸು ಆಗಲೇ ಧಾರವಾಡಕ್ಕೆ ಹೋಗಿತ್ತು. ಧಾರವಾಡದಲ್ಲಿ ಅಡ್ಡ ಹೆಸರುಗಳು ಅಂದರೆ Surnameಗಳು ತುಂಬ ವಿಚಿತ್ರವಾಗಿ ಇರುತ್ತವೆ.
ಬೆತ್ತಲೆ ಗಂಡಸು
ಮಧ್ಯರಾತ್ರಿಯ ನೀರವತೆಯಲ್ಲಿ ಪೊಲೀಸ್ ಸ್ಟೇಷನ್ನಿನ ಫೋನು ಕಿರುಚಿಕೊಂಡಿತು.
“ಹೆಲೋ, ಆಫೀಸರ್, ಇಲ್ಲೊಬ್ಬ ಗಂಡಸು ಬೆತ್ತಲೆ ತಿರುಗುತ್ತಿದ್ದಾನೆ.”
“ಹೌದಾ ಮೇಡಂ, ನಿಮ್ಮ ಅಡ್ರೆಸ್ ಕೊಡಿ ನಾವೀಗಲೇ ಬರ್ತಿದೀವಿ. ಬಾಗಿಲು ಚಿಲಕ ಹಾಕಿಕೊಳ್ಳಿ ಗಾಬರಿಯಾಗಬೇಡಿ.”
ಐದು ನಿಮಿಷದಲ್ಲಿ ಪೊಲೀಸ್ ಆಫೀಸರ್ ಆಕೆಯ ಮನೆಯಲ್ಲಿದ್ದ.
“ಎಲ್ಲಿ ಮೇಡಂ?”
“ಇತ್ತ ಬನ್ನಿ ಆಫೀಸರ್. ನೋಡಿ ಅವನಿನ್ನೂ ನಾಚಿಕೆ ಇಲ್ಲದೆ ನಿಂತಿದ್ದಾನೆ.”
ಸತ್ಯ ಹರಿಚಂದ್ರ
ಗುರುಗಳು: (ಹರಿಶ್ವಂದ್ರನ ಕಥೆ ಹೇಳಿದ ನಂತರ) ಈ ಕಥೆ ನೀತಿ ಏನು ಮಕ್ಕಳೆ ?
ಶಿಷ್ಯರು: ಸುಳ್ಳು ಹೇಳದಿದ್ರೆ.......... ಸುಡುಗಾಡೇ ಗತಿ. !!!
ಮತ್ತು ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು ,
ಜವಾನಿ ಜಾನೆ ಮನ ಮೇರಾ ಜೀನ್ಸ್ ....
ರೀ... ನಿಮಗೆ ಫ್ಯಾಷನ್ನೆ ಗೊತ್ತಿಲ್ಲ ಎಂದಳು ನನ್ನ ಮಡದಿ. ಈ ಸರಿ ಏನೇ ಆಗಲಿ ಒಂದು ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳಿರಿ ಎಂದಳು. ಒಂದು ಬಾರಿ ಜೀನ್ಸ್ ಹಾಕ್ಕೊಂಡು ನೋಡಿರಿ ಹೀರೋ ಥರ ಕಾಣಿಸುತ್ತೀರಿ ಎಂದಿದ್ದಳು ನನ್ನ ಹೆಂಡತಿ. ಆಯಿತು ಎಂದು ಹೇಳಿದೆ.

No comments: