Sunday, July 25, 2010

ಹಾಸ್ಯ (ಸುಮ್ಮನೆ ನಕ್ಕುಬಿಡಿ)3

ನಗ್ರೀ! ನಕ್ಕು ಬಿಡಿ!!
ಮುದುಕಿ: ರೀ, ನಮ್ಮನೆ ಎದುರಿಗೆ ಇರೋ
ಗುಜರಿ ಅಂಗಡಿಯ ಹುಡುಗ ನನ್ನ
ನೋಡಿ ದಿನಾ ನಗ್ತಾನೆ..
ಮುದುಕ: ಇರ್ಲಿ ಬಿಡೇ.. ಅವನಿಗೆ ಯಾವಾಗಲು
ಹಳೆ ಸಾಮಾನ್ ಮೇಲೇನೆ ಕಣ್ಣು...!!!!!
ನಿನಗೆ ಅಕ್ಕ ಇಲ್ವಾ
ಪುಟ್ಟ ಹುಡುಗ ಅಕ್ಕನ ರೂಮಿನ ಬಾಗಿಲು ತೆರದ.
ಅಲ್ಲಿ ಅಕ್ಕನ ಬಾಯ್ ಫ್ರೆಂಡ್ ನಿಂತಿದ್ದ .
ಅದನ್ನ ನೋಡಿ ಮುಗ್ಧ ಹುಡುಗ ಯೇಳಿದ
ದಿನಾಲೂ ನನ್ನ ಅಕ್ಕನ ನೋಡೋಕೆ ಬರ್ತಿಯಲ್ಲ
ಯಾಕೆ ನಿನಗೆ ಅಕ್ಕ ಇಲ್ವಾ?
ಹತ್ತು ವರ್ಷಗಳಿಂದ ಸಂಬಳ ಪಡೆದುಕೊಳ್ಳುತ್ತಿದ್ದಾರೆ
"ಕಿಟ್ಟು-- ನಮ್ಮಪ್ಪ ಬ್ಯಾಂಕಲ್ಲಿ ಒಂದು ದಿನವೂ ಕೆಲಸ ಮಾಡದಿದ್ದರೂ ಸಹ ಕಳೆದ ಹತ್ತು ವರ್ಷಗಳಿಂದ ಸಂಬಳ ಪಡೆದುಕೊಳ್ಳುತ್ತಿದ್ದಾರೆ.
ಪುಟ್ಟು-- ಅದು ಹೇಗೆ ಸಾಧ್ಯವೋ?
ಕಿಟ್ಟು-- ನಮ್ಮಪ್ಪ ನೈಟ್ ವಾಚ್ ಮ್ಯಾನ್ ಎಂದ."
ಹಾಟ್ ಕಿಸ್
ಲೆಕ್ಚರರ್ ಅಂದರೆ.....!
ಟೀಚರ: ಲೆಕ್ಚರರ್ ಅಂದರೆ ಯಾರು ?
ವಿದ್ಯಾರ್ಥಿ: ಇನ್ನೊಬ್ಬರು ನಿದ್ರೆ ಮಾಡ್ತಿದ್ದಾಗ ಒಂದೇ ಸಮನೆ ಮಾತಾಡಿ ಡಿಸ್ಟರ್ಬ್ ಮಾಡೋ ಕೆಟ್ಟ ಚಾಳಿಯವನು.

ಕಚಗುಳಿ ಇಡುವ ಹಾಸ್ಯಗಳು
ಮೊದಲ ಪರಿಣಾಮ ಗಂಡನಿಗೆ
ವಿದೇಶಿ-- ನಿಮ್ಮ ದೇಶದಲ್ಲಿ ಮೊದಲು ಗಂಡನಿಗೆ ಉಣಬಡಿಸಿ ನಂತರ
ಹೆಂಡತಿ ಉಣ್ಣುತ್ತಾಳೆ ಯಾಕೆ?
ಭಾರತೀಯ-- ಒಂದು ವೇಳೆ ಅಡುಗೆಯಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ,
ಅದರ ಮೊದಲ ಪರಿಣಾಮ ಗಂಡನಿಗೆ ಆಗಲೆಂದು ಅದಕ್ಕೆ.
ಗೊತ್ತಿದ್ದು ಗೊತ್ತಿದ್ದು!!
ಜನ : ಗೊತ್ತಿದ್ದು ಗೊತ್ತಿದ್ದು!! ಆ ಬಲಿಷ್ಟ ಎದುರಾಳಿಗಳಿಗೆ ಸವಾಲ್ ಹಾಕಿ ಚುನಾವಣೆಗೆ ನಿಂತಿದ್ದೀರಾ, ಕೇಳಿದ್ರೆ ರೆಕಾರ್ಡ್ ಬ್ರೇಕ್ ಮಾಡ್ತೀನಿ ಅಂತೀರಾ ಇದರ ಮರ್ಮ??
ಲೋಕಿ : ಮತ್ತಿನ್ನೀನ್ರಿ, ಒಂದು ರೆಕಾರ್ಡ್ ಅತಿ ಹೆಚ್ಚು ಬಾರಿ ಡಿಪಾಸಿಟ್ ಕಳ್ಕಂಡಿರುತ್ತೀನಿ.
ಎರಡನೇಯದಾಗಿ ಬಹಳ ಹೆಚ್ಚು ಅಂತರದಿಂದ ಇಡೀ ರಾಜ್ಯದಲ್ಲೆ ಎದುರಾಳಿಗೆ ಲೀಡ್ ಕೊಟ್ಟ, ಅಂತ ಪೇಪರಿನಲ್ಲಿ ಫೋಟೋ
ಹಾಗೂ ಹೆಸರು ಬರುತ್ತಲ್ಲ, ಇದೂ ರೆಕಾರ್ಡ್ ತಾನೆ!!!
30 ವರ್ಷ ಅನುಭವ 
ಸಂದರ್ಶಕ: 20 ವರ್ಷ ವಯಸ್ಸಿನ ನೀನು 30 ವರ್ಷ ಅನುಭವ ಎಂದು ಹಾಕಿದ್ದೀಯಲ್ಲ?
ಅಭ್ಯರ್ಥಿ: ಓವರ್ ಟೈಮ್ ಮಾಡುತ್ತಿದ್ದೆ.
ಟ್ಯೂಬ್ ಲೈಟ್
ಸಂತ: ನನಗೆ ಬ್ಲ್ಯಾಕ್ ಟ್ಯೂಬ್ ಲೈಟ್ ಕೊಡಿ.
ಅಂಗಡಿಯವ: ಬ್ಲ್ಯಾಕ್ ಟ್ಯೂಬ ಲೈಟ್ ಯಾಕೆ?
ಸಂತ: ಹಗಲನ್ನ ಕತ್ತಲೆ ಮಾಡಿ ಮಲಗೋಕೆ.
ರಾವಣ ಸೀತಾ
ರಾವಣ : ಬೀಕ್ಷೆ ಪ್ಲೀಸ್
ಸೀತಾ : ತಗೊಳ್ಳಿ
ರಾವಣ : ಲೈನ್ ದಾಟಿ ಬಾರಮ್ಮ (ಸೀತೆ ಹೊರಗೆ ಬರುತಾಳೆ)
ರಾವಣ :ಹ ಹಾ ಹಾಅ ನಾನು ನಾನು ಸ್ವಾಮಿ ಅಲ್ಲ ರಾ ...ವ ..ಣ
ಸೀತೆ ಹ ಹಾ ಹಾಅ ನಾನು ಸೀತಮ್ಮ ಅಲ್ಲ ಮನೆ ಕೆಲಸದ ನಿ0...ಗ...ಮ್ಮ
ಇಷ್ಟೊಂದು ಕಡಿಮೆ ಮಾರ್ಕ್ಸ್ ?
ಅಪ್ಪ ; ಇಷ್ಟೊಂದು ಕಡಿಮೆ ಮಾರ್ಕ್ಸ್ ?
ಕಪಾಳಕ್ಕೆ ಹೊಡಿಬೇಕು ಅನ್ನಿಸುತಿದೆ ನನಗೆ ..
ಮಗ ; ನಂಗು ಹಗೆ ಅನ್ನಿಸ್ತಿದೆ ಅಪ್ಪ ನಡಿ ಹೋಗೋಣ
ನನಗೆ ಅ ಮೇಷ್ಟ್ರು ಮನೆ ಗೊತ್ತು .....!
ನಿಜವಾದ ಇರುವೆಗಳೇ
ಅಂದು ಗುಂಡ ಮೊದಲ ಸಲ ವಿಮಾನ ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ ಬಳಿ ಕೇಳಿ ತಿಳಿದುಕೊಂಡಿದ್ದನು..
ಗುಂಡ : ವಾಹ್! ಅವರೆಲ್ಲಾ ಹೇಳಿದ್ದು ನಿಜ! ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ...
ಗಗನ ಸಖಿ(air hostess): ಸಾರ್! ಅವುಗಳು ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ...
ಇವಗಿನ್ನೂ (2009)!
ಮೊದಲನೇ ಹೆಂಡತಿ
ಹೆಂಡತಿ ; ನಿಮಗೆ ರಾಣಿ ಅಂತ ಮೊದಲನೇ ಹೆಂಡತಿ ಇರೋ ವಿಷ್ಯ ನಂಗೆ ಮೊದಲೇ ಯಾಕೆ ಹೇಳಿಲ್ಲ?
ಗಂಡ ; ಮೊದಲೇ ಹೇಳಿದ್ದೆ ಅಲ್ವಾ ಚಿನ್ನ ನಿನ್ನ ರಾಣಿ ತರ ನೋಡ್ಕೋತಿನಿ ಅಂತ .....
ನಕ್ಕಾಗ ನನ್ನವಳು
ನಕ್ಕಾಗ ನನ್ನವಳು
ದು೦ಡು ಮಲ್ಲಿಗೆಯಂತೆ!!
ಅತ್ತರೋ ಇವಳು
ಮುದ್ದಾದ ಮಗುವಂತೆ
ಮುನಿದಾಗ ಮಾತ್ರ
RDX Bomb ನಂತೆ !
ನಡುರಾತ್ರಿ ಕುಡುಕನೊಬ್ಬ 
ಖಾಲಿ ಗೋರಿಯೊಳಗೆ ಬಿದ್ದು 'ಚಳಿ ತಾಳೋಕಾಗ್ತಾ ಇಲ್ಲ...
ಯಾರದರೂ ಬನ್ನಿ' ಎಂದು ಕೂಗುತ್ತಾ ಇದ್ದ.
ಇನ್ನೊಬ್ಬ ಕುಡುಕ ಬಂದು ಕೆಳಗೆ ಬಾಗಿ ನೋಡಿ...'ಚಳಿಯಾಗದೆ ಇನ್ನೇನಾದೀತು? ಮೂರ್ಖರು!
ಕೆಲವು ಹಾಸ್ಯಗಳು
ನಾಟಕಕ್ಕೆ ಬರಲು ಕಾರಣ?
ಕಲಾಕ್ಷೇತ್ರವೊಂದರಲ್ಲಿ ನಾಟಕ ನಡೆಯುತ್ತಿತ್ತು. ಪ್ರವೇಶ ಉಚಿತ. ಕಾರ್ಯಕ್ರಮ ಸಂಯೋಜಕರು ಹೊರಗೆ ಒಂದು ಪುಸ್ತಕ ಇಟ್ಟು ನೀವು ಈ ನಾಟಕಕ್ಕೆ ಬರಲು ಕಾರಣ ಏನು? ಎಂಬ ಪ್ರಶ್ನೆ ಕೇಳಿ ವೀಕ್ಷಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಮಹಿಳೆಯೊಬ್ಬರು ಆ ಪ್ರಶ್ನೆಗೆ ಹೀಗೆ ಉತ್ತರ ಬರೆದಿದ್ದರು. ಹೊರಗೆ ಜೋರು ಮಳೆ ಬರುತ್ತಿತ್ತು. ಹೀಗಾಗಿ ವಿಧಿ ಇಲ್ಲದೆ ಒಳಗೆ ಬಂದೆ.
ನಗಲು ಅವಕಾಶವನ್ನೇ ಕೊಡಲ್ಲ!
ಒಂದಿಷ್ಟು ಹಾಸ್ಯಗಳು ಮತ್ತು ಬುದ್ದಿ ಮಾತುಗಳು...
ಜಗತ್ತು ಏನ್ ಹೇಳುತ್ತೆ ಅಂತ ಚಿಂತೆ ಮಾಡ್ಬೇಡಿ .... 
ಜಗತ್ತು ಏನ್ ಹೇಳುತ್ತೆ ಅಂತ ಚಿಂತೆ ಮಾಡ್ಬೇಡಿ ....
ಜನ ಏನ್ ಅಂದ್ಕೋತಾರೋ ಅಂತ ತಲೆ ಕೆಡಿಸ್ಕೋಬೇಡಿ ....
ನಿಮ್ಮ ಮನಸ್ಸಿಗೆ ಸರಿ ಅಂತ ಅನ್ನಿಸಿದ್ರೆ ಮಾತ್ರ,
ದಿನಾಲೂ ಸ್ನಾನ ಮಾಡಿ
ಹಾಸ್ಪಿಟಲ್ ನಿಂದ ಕಾಲ್ ಬಂದಿದೆ
ಹೆಂಡತಿ ; ಅಪ್ಪನಿಗೆ ಕಾರ್ ಆಕ್ಸಿಡೆಂಟ್ ಆಗಿದೆಯಂತೆ
ಹಾಸ್ಪಿಟಲ್ ನಿಂದ ಕಾಲ್ ಬಂದಿದೆ.
ಗಂಡ ; ಬರೆ ಕಾಲ್ ಮಾತ್ರ ಕಲ್ಸಿದರ? ಉಳಿದ ಬಾಡಿ ಎಲ್ಲ ಏನಾಯ್ತು?
ಮೈಸೂರ್ ಪಾಕ್ ನಿಂದ.
ಡಾಕ್ಟರ್ ; ಒಂದೇ ಸಲ ೩ ಹಲ್ಲು ಹೇಗೆ ಹೋಯ್ತು?
ಗುಂಡ ; ನಾನಾ ಹೆಂಡ್ತಿ ಮಾಡಿದ ಮೈಸೂರ್ ಪಾಕ್ ನಿಂದ.
ಡಾಕ್ಟರ್; ತಿನ್ನೋದಿಲ್ಲ ಅನ್ಬೇಕಿತ್ತು.
ಗುಂಡ;ತಿನ್ದಿದಕ್ಕೆ ೩ ಹೋಯ್ತು ಬೇಡ ಅಂದಿದ್ರೆ ೩೨ ಹೋಗ್ತಿತು
ಶೇವ್ ಮಾಡೋದು
ಹುಡುಗಿ ; ನೀನು ವಾರದಲ್ಲಿ ಎಷ್ಟು ಸರಿ ಶೇವ್ ಮಾಡ್ತೀಯ?
ಹುಡುಗ ; ವಾರಕ್ಕೆ ಅಲ್ಲ ದಿನಕೆ ೩೦ ರಿಂದ ೪೦ ಸರಿ ಮಾಡ್ತೀನಿ.
ಹುಡುಗಿ ; ಏನು ನೀನೇನು ಹುಚ್ಚನ ?
ಹುಡುಗ ; ನನ್ ಕೆಲ್ಸನೆ ಶೇವ್ ಮಾಡೋದು .
ಜಸ್ಟ್ ರಿಲ್ಯಾಕ್ಸ್........
ಸರ್ವಧಾರಿ ವರ್ಷ ಇನ್ನೇನು ಮುಗಿಯುತ್ತ ಬಂದಿದೆ. ತಿಂಗಳ ಕೊನೆ. ಆರ್ಥಿಕ ಹೊಡೆತದಿಂದಾಗಿ ಬ್ಯಾಂಕಲ್ಲಿ ಹಣ ಉಳಿದಿರುವುದೂ ಅಷ್ಟಕ್ಕಷ್ಟೇ. ಆದರೆ, ಯುಗಾದಿಯ ನೆಪ ಕೇಳಬೇಕಲ್ಲ. ಅಳಿದುಳಿದ ದುಡ್ಡನ್ನು ಕೆದರಿಕೊಂಡು ಹಬ್ಬ ಮಾಡಬೇಕೆಂದು ಬ್ಯಾಂಕಲ್ಲಿ ಜನ ಜಮಾಯಿಸಿದ್ದಾರೆ.
ಕ್ಯಾಲೆಂಡರ್
ಸರ್ದಾರ್ ಕ್ಯಾಲೆಂಡರ್ ಶಾಪ್ ಗೆ ಹೋದ.
ಸರ್ದಾರ್ : ಒಂದು ಕ್ಯಾಲೆಂಡರ್ ಕೊಡಪ್ಪ
ಸೇಲ್ಸ್ ಮ್ಯಾನ್ : ಯಾವ ಕ್ಯಾಲೆಂಡರ್ ಕೊಡ್ಲಿ
ಸರ್ದಾರ್ : ಏನಪ್ಪಾ ಅಷ್ಟೂ ಗೊತ್ತಾಗಲ್ವ? ಜಾಸ್ತಿ ರಜಾ ಇರೋದು ಕೊಡಪ್ಪ
ಮನುಷ್ಯ ಮತ್ತು ಮೊಬೈಲು
ಮನುಷ್ಯನಿಗೂ ಮತ್ತು ಮೊಬೈಲಿಗೂ ಏನು ವ್ಯತ್ಯಾಸ?
ಮನುಷ್ಯ ಕಾಲು ಇಲ್ಲದೇ ಬ್ಯಾಲೆನ್ಸ ಮಾಡಕ್ಕಾಗಲ್ಲ
ಮೊಬೈಲ ಬ್ಯಾಲೆನ್ಸ ಇಲ್ಲದೇ ಕಾಲ್ ಮಾಡೋಕಾಗಲ್ಲ!
ಮೊಟ್ಟೆ ಇಡು ನೋಡೋಣ
ಹುಂಜಃ ಐ ಲವ್ ಯು
ಹೇಂಟೆಃ ನೀನು ನನ್ನನ್ನು ಎಷ್ಟು ಪ್ರೀತಿಸ್ತೀಯಾ?
ಹುಂಜಃ ನಿನಗೋಸ್ಕರ ಏನು ಬೇಕಾದ್ರೂ ಮಾಡ್ತೀನಿ.
ಹೇಂಟೆಃ ಹಾಗಿದ್ರೆ ನನ್ನ ತರಾ ಮೊಟ್ಟೆ ಇಡು ನೋಡೋಣ.
ಬ್ರೆಕ್ ಡ್ಯಾನ್ಸ್
ಸರ್ದಾರ್ ಸೈಕಲ್ ಬ್ರೆಕ್ ನ ಕೈಯಲ್ಲಿ ಹಿಡ್ಕೊಂಡ್ ಡ್ಯಾನ್ಸ್ ಮಾಡ್ತಾ ಇರ್ತಾನೆ.
ಗೆಳೆಯಃ ಲೋ ಏನೋ ಮಾಡ್ತಾ ಇದೀಯಾ ನೀನು?
ಸರ್ದಾರ್: ಓಯೆ ಅಷ್ಟೂ ಗೊತ್ತಾಗಲ್ವ ನಿಂಗೆ. ಬ್ರೇಕ್ ಡ್ಯಾನ್ಸ್
ಸಿಐಡಿ
ಸಿಐಡಿ: ಈ ಕ್ರಿಮಿನಲ್ಸ ಯಾಕೆ ತಮ್ಮ ಕೆಲಸ ಆದ ತಕ್ಷಣ ಬೆರಳಚ್ಚು ಬಿಟ್ಟು ಹೋಗುತ್ತಾರೆ?
ಸರ್ದಾರಃ ನನಗನ್ನಿಸುತ್ತೆ ಅವರು ಅನಕ್ಷರಸ್ಥರಿರಬೇಕು. ಅವರಿಗೆ ಓದು ಬರಹ ಗೊತ್ತಿದ್ದರೆ ಸಹಿ ಮಾಡಿ ಹೋಗ್ತಾ ಇದ್ದರು.
ಮೊಟ್ಟೆಯಿಂದ ಹೊರಗೆ..
ಟೀಚರ್ : ಕೋಳಿ ಮರಿ ಮೊಟ್ಟೆಯಿಂದ ಹೇಗೆ ಹೊರಗೆ ಬರುತ್ತೆ?
ಗುಂಡಃ ಕೋಳಿ ಮರಿ ಮೊಟ್ಟೆಯಿಂದ ಹೇಗೆ ಹೊರಗೆ ಹೇಗೆ ಬಂತು ಅಂತಾ ಮುಖ್ಯ ಅಲ್ಲ. ಅದು ಮೊಟ್ಟೆಯ ಒಳಗೆ ಹೇಗೆ ಹೋಯ್ತು ಅನ್ನೋದೇ ಮುಖ್ಯ.
ಯಮರಾಜನ ಚಿಂತೆ
ಯಮರಾಜ
ಒಮ್ಮೆ ಯಮರಾಜ ಮುಖ ಊದಿಸಿಕೊಂಡು ಕೂತಿದ್ದ. ಚಿತ್ರಗುಪ್ತ ಅವನ ಬಳಿ ಬಂದು "ಯಮರಾಜರೇ ಯಾಕೆ ಉದಾಸೀನರಾಗಿರುವಿರಿ?" ಅಂತಾ ಕೇಳಿದ.
"ಹೇ ಚಿತ್ರಗುಪ್ತ ಭೂಲೋಕದಲ್ಲಿ ಇತ್ತೀಚೆಗೆ ಪಾಪ ಮಾಡುವವರ ಸಂಖ್ಯೆ ತೀರಾ ಹೆಚ್ಚುತ್ತಿದೆ. ಆದ್ದರಿಂದ ನರಕದಲ್ಲಿ ಸ್ವಲ್ಪವೂ ಜಾಗವಿಲ್ಲದಂತಾಗಿದೆ. ಏನು ಮಾಡಲಿ ಎಂದು ಹೊಳೆಯುತ್ತಿಲ್ಲ" ಎಂದ ಯಮರಾಜ.
ಸುಮ್ಮನೆ ನಕ್ಕು ಬಿಡಿ
ಮನೆ ಮಾಲಿಕಃ ರಾಮು ಹೊರಗಡೆ ಹೂ ಗಿಡಗಳಿಗೆಲ್ಲಾ ನೀರು ಹಾಕಪ್ಪಾ...
ರಾಮುಃ ಹೊರಗಡೆ ಮಳೆ ಬರ್ತಾ ಇದೆ, ದಣಿ.
ಮನೆ ಮಾಲಿಕಃ ನೋಡು, ಆ ಕಡೆ ರೂಮಲ್ಲಿ ಕೊಡೆ ಇದೆ, ತಗೋ.
ಕೇಳಿದ್ದು
ಸಾಸಕರ್ನಾ ಹುಡಕಂಡು ಬೆಳಗಾವಿ ಜನ ಗೋವಾ ಬೀಚ್ ಗೆ ಹೋಗಾವ್ರಂತೆ!!
ಏನ್ಲಾ, ಮಹಾರಾಸ್ಟ್ರಾದ ಗಡಿಯಾಗೆ ಬಸ್ನೆಲ್ಲ ಸುಟ್ಟಾವ್ರಂತೆ. ಆದ್ರೆ ಬೆಳಗಾವ್ಯಾಗೆ ಪಸಂದ ಪಸಂದ ಅಡಿಗೆ ಮಾಡಿ ಹಾಕ್ತ ಇದ್ದಾರಂತಲ್ಲ ಅವ್ರದ್ದು ಹೊಟ್ಟೆನೋ ಹೊಳೆಕೊಡ್ಳೊ ಅಂತ ಗೋತ್ತಗಾಕಿಲ್ಲಪ್ಪ..
ಬೆಳಗಾವಿನ ಉದ್ದಾರ ಮಾಡ್ತಿವಿ ಅಂತ ಬೆಂಗಳುರಿಂದ ಅಲ್ಲಿಗೆ ಎಲ್ಲ್ರನ್ನ ಕಟ್ಟಕಂಡು ಹೋಗೈತೆ ಸರ್ಕಾರ.ಬೆಳಗಾವಿನ ಉದ್ದಾರ ಮಾಡೋದು ಬಿಟ್ಟು ತಮ್ಮ ಉದ್ದಾರಾನ ಮಾಡಕಾತಾ ಇದ್ದಾರಲ್ಲ ಸಿವಾ!!
ಅಮ್ಮಾ ಬೇಕು ಅಂತಾ
ಅಪ್ಪಾಃ ಮಕ್ಕಳೇ ನಾನು ಹೊರಗಡ ಹೋಗ್ತಾ ಇದ್ದೇನೆ. ನಿಮಗೆ ಏನು ಬೇಕು?
ಮಕ್ಕಳುಃ ಚಾಕಲೇಟ್, ಐಸ್ ಕ್ರೀಮ್ ಬೇಕು ಅಪ್ಪಾ
ಅಪ್ಪಾಃ ಬಡ್ಡಿ ಮಕ್ಕಳು ಹೊಸ ಅಮ್ಮ ಬೇಕು ಅಂತಾ ಒಂದು ಸರೀನೂ ಕೇಳಲಿಲ್ಲ!
ಕುಮಾರಣ್ಣಾ ,ಅನೀತಕ್ಕನ್ನ ಬೇರೆ ಬೇರೆ ಮಾಡವ್ರಂತೆ!!
ಕುಮಾರಸ್ವಾಮಿ - ಅನಿತಾ ಕುಮಾರ ಸ್ವಾಮಿ
ಪಾಪ ಇವಾಗಷ್ಟೇ ಶಾನೆ ಕಷ್ಟಪಟ್ಟು ಎಂ.ಎಲ್.ಎ ಆದ ಗೌಡರ ಸೊಸೆ ಅಲಿಯಾಸ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನೀತಾ ಗೆ ಇದೆಂತ ಕಷ್ಟದ್ ದಿನಗಳಯ್ಯ ಅಂದನಂತೆ ಸ್ಪೀಕರ್ ರೀಪೇರಿ ಮಾಡ್ತಿದ್ದ ಜಗ್ಯ.
ಮೊನ್ನೆ ಅಷ್ಟೆ ಪೇಪರ್ ನಾಗೆ ಆರೀತಿ "ಮಧುಗಿರಿಗೆ ಅನೀತಕ್ಕ ಮಧುಚಂದ್ರಕ್ಕೆ ಕುಮಾರಣ್ಣ" ಅಂತೆಲ್ಲ ಬರೆದು ಮನಸ್ಸಿನ ನೆಮ್ಮದಿನೆ ಕೆಡ್ಸಾವ್ರಂತೆ,ಹಿಂಗೆ ಹಂಗೆ ಅಂತೆಲ್ಲ ರೆಕ್ಕೆ ಪುಕ್ಕ ಹಾರ್ತಾ ಇದ್ರೆ ಪಾಪ ಅನೀತಕ್ಕಾನಾದ್ರು ಅದೇಂಗೆ ರಾಧಕ್ಕನ ಮನೆ ಕಡೆ ತಲೆ ಹಾಕಂಡ ಮಲಕ್ಕತ್ತಾಳ ಎಂದ ಅನಂತಣ್ಣ.
ಸ್ವಲ್ಪ ನಕ್ಕು ಬಿಡೋಣ..!!
1. ಸ್ತ್ರೀ, ಒಂದು ಮಗುವಿಗೆ ಜನ್ಮವಿತ್ತರೆ ಕಂಗ್ರಾಜ್ಯುಲೇಶನ್ಸ್ ಸಿಗುತ್ತೆ.
ಮದುವೆಯಾದರೆ ಉಡುಗೊರೆಗಳು ಸಿಗುತ್ತವೆ.
ಗಂಡ ತೀರಿಹೋದ್ರೆ ಇನ್ಸ್ಯೂರೆನ್ಸ್ ಸಿಗುತ್ತೆ.
ಆದ್ರೂ ಈ ಹೆಂಗಸ್ರೂ ನಮಗೆ ಅದಿಲ್ಲ, ಇದಿಲ್ಲ ಅಂತ ಕೊರಗ್ತಿರ್ತಾರೆ.
ಘಜನಿ ಕನ್ನಡದಲ್ಲಿ ಬಂದಿದ್ದರೆ
ಅಮೀರ ಖಾನ್ ಅವರ ಘಜನಿ ಬಿಡುಗಡೆ ಆಗಿ ಬಾಕ್ಸ್ ಆಫೀಸಲ್ಲಿ ಕೋಟಿಗಟ್ಟಲೆ ದೋಚುತ್ತಿದೆ. ಅದು ಕನ್ನಡದಲ್ಲಿ ಬಂದಿದ್ದರೆ ಹೀಗಿರುತಿತ್ತೇ? ಸುಮ್ನೆ ತಮಾಷೆಗಾಗಿ  ಹಾಗೆ ಹಿಂದಿ ಘಜನಿ ಫಿಲಂ ತುಂಬಾ ಚೆನ್ನಾಗಿದೆ. ನೀವು ನೋಡಿದ್ದೀರಾ? ತಮಿಳು ಘಜನಿ ನೋಡಿದ್ದರೆ ಇದು ಅದರ ಕಾಪಿ. ಕೊನೆಯ 30 ನಿಮಿಷದ ಕಥೆ ಬದಲಾಗಿದೆ.
ಹುಡುಗಿನೋ, ಹುಡುಗಾನೋ
ಜವಾನ : ಸಾರ್, ನಿಮ್ಮನ್ನು ಕೇಳಿಕೊಂಡು ಯಾರೋ ಬಂದಿದ್ದಾರೆ
ಆಫೀಸರ್ : ಹುಡುಗಿನೋ, ಹುಡುಗಾನೋ ?
ಜವಾನ : ಗೊತ್ತಿಲ್ಲ ಸಾರ್ ಕೇಳಿಕೊಂಡು ಬರುತ್ತೇನೆ .
ಅವಳು ಕೆಟ್ಟ ಹುಡುಗಿ, ನಾನು ಅಷ್ಟು ಚೆನ್ನಾಗಿ ಹೇಳಿದೀನಿ
ಆಕೆ - ನಾನು ಅವಳಿಗೆ ಹೇಳಬೇಡ ಅಂತ ಹೇಳಿದ್ದನ್ನು ನೀನು ಅವಳಿಗೆ ಹೇಳಿದೆ ಅಂತ ಅವಳು ಹೇಳಿದಳು.
ಈಕೆ - ಅವಳು ಕೆಟ್ಟ ಹುಡುಗಿ, ನಾನು ಅಷ್ಟು ಚೆನ್ನಾಗಿ ಹೇಳಿದೀನಿ ನಿನಗೆ ಹೇಳಬೇಡ ಕಣೇ ಅಂತ
ಆಕೆ - ಹೋಗಲಿಬಿಡು ! ನಾನು ಕೇಳ್ದೆ ಅಂತ ನೀನು ಮತ್ತೆ ಅವಳಿಗೆ ಹೇಳಬೇಡ ಗೊತ್ತಾಯಿತಾ ಅಷ್ಟೆ ....
ಪ್ರೀತಿಸಿ ಪ್ರೀತಿಸಲು ಬೀಡಿ ಪ್ರೀತಿಗಾಗಿ ಜೀವಿಸಿ
ಲೋಕೇಶನ್ನೂ ಪ್ರೀತ್ರೊ ಹೃದಯ ಇರುತ್ತಾ
ಕಾಲೇಜು,ಮ್ಯಾರೇಜು ಮತ್ತು ಇನ್ನೆರಡು ಹಾಸ್ಯ
ಉಪಾಧ್ಯಾಯರು
ಎಸ್ ಎಸ್ ಎಲ್ ಸಿ .ಓದುತ್ತಿದ್ದ ಹುಡುಗಿಯನ್ನು ಉಪಾಧ್ಯಾಯರು
ಕೇಳಿದರು - ನಿನ್ನ ಮುಂದಿನ ಭವಿಪ್ಯವೇನು?
ಹುಡುಗಿ: ಪಾಸಾದರೆ ಕಾಲೇಜು, ಇಲ್ಲದಿದ್ದರೆ ಮ್ಯಾರೇಜು
ಹೀಗೊಂದು ಪ್ರೇಮ ಪತ್ರ
ಪ್ರಿಯೆ,
ಇದುವರೆಗೂ ನೀನು ನನ್ನಲ್ಲಿ ತೋರುತ್ತಿದ್ದ ಪ್ರೀತಿ ಇಂದು
ಬೇಡವಾಗಿದೆ. ನಿನ್ನಿಂದ ದೂರವಾಗಬೇಕೆಂಬ ಆಸೆ ಬಹಳ
ಡಾಕ್ಟರಿಗಿಂತ ಬುದ್ದಿವಂತನಾ?
ಡಾಕ್ಟರ್ : ಸಿಸ್ಟರ್ ಈ ರೋಗಿ ಸತ್ತುಹೋಗಿದ್ದಾನೆ.
ರೋಗಿ : ಇಲ್ಲ ಡಾಕ್ಟರ್! ನಾನಿನ್ನೂ ಬದುಕಿದ್ದೇನೆ
ಸಿಸ್ಟರ್ : ಮುಚ್ಚಯ್ಯ ಬಾಯಿ ಸಾಕು. ಏನೋ ಮಾತಾಡ್ತಾನೆ ಏನು ನೀನು ಡಾಕ್ಟರಿಗಿಂತ ಬುದ್ದಿವಂತನಾ?
ಬೈಟೊ ಕಾಫಿ !!! -
ನನ್ನ ಪಕ್ಕದಲ್ಲಿ ಕುಳಿತ್ತಿದ್ದ ಮೋಹನ ಡೆಸ್ಕ್ ಬಳಿ ಎನೋ ಟೆಕ್ನಿಲ್ ಡೌಟ್ ಕೇಳೋ ತರ ಹೋಗಿ "ಏನೊ ರಿಸೈನ್ ಮಾಡಿದ್ಯಂತೆ ಅಂದೆ ... ಅಂತ ಪಿಸುಗುಡುತ್ತಾ ಕೇಳಿದೆ...
ನಡಿ ಕಾಫಿ ಕುಡ್ಕೊಂಡು ಬರ್ಓಣ ..... ಅಂತ ಹೋದ್ವಿ ...
ಅವನು ಹಲ್ಲುಕಿರಿದು "ಯಾರು ಹೇಳಿದ್ರು ?? "... ನಾನು ದೊಡ್ಡ ಜಾಸೂಸ್ ತರ "ಹೇಂಗೊ ಗೊತ್ತಾಯ್ತು" ಅಂದೆ !!!
"ಹೌದು, ೨ ವರ್ಷ ಆಯಿತು , ಅದಕ್ಕೆ .... " ಅಂತ ಮೋಹನ ಹೇಳಿದ
"ಎಲ್ಲಿ ಹೋಗ್ತೈದ್ದಿಯಾ ?? " ಕೇಳಿದೆ
"೩-೪ ಆಫರ್ ಇದೆ, ಡಿಸೈಡ್ ಮಾಡಬೇಕು " ಈಗೆ ಹೇಳಿ ಕುತುಹಲ ಜಾಸ್ತಿ ಮಾಡಿದ. ...
"ಎಷ್ಟು ಆಫರ್ ??
"ಇಲ್ಲಿಗಿಂತ ೫೦% ಜಾಸ್ತಿ "....
"ಆಮೇಲೆ ಇವರೇನು ಹೇಳ್ತ ಇದ್ದಾರೆ ? ಎನಾದ್ರು ಹೈಕ್ ಮಾಡಿದ್ರಾ ? ,
ಹಾಸ್ಯ
ಅದೋ ನೋಡು ಚಂದ್ರಬಿಂಬ ; ಇದೋ ನೋಡು ತಂತಿ ಕಂಬ ; ತುಂಬಿತೇ ನಿತಂಬ ? ಕೈಗೆ ತಗೋ ಪ್ಲಾಷ್ಟಿಕ್ಚಂಬ !!
ಗುಂಡನ ಉತ್ತರಗಳು
ನಮ್ಮ ಗುಂಡ ಪರೀಕ್ಷೆಯಲ್ಲಿ ಕೊಡುವ ಉತ್ತರ ಹೇಗಿರುತ್ತೆ? ಕೆಲವು ಸ್ಯಾಂಪಲ್ ಗಳು ಹೀಗಿವೆ....
ಪ್ರಶ್ನೆಃ ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು?
ಉತ್ತರಃ ಕುಳಿತುಕೊಂಡನು.
ಪ್ರಶ್ನೆಃ ಗಣಪತಿಯ ಕತೆಯಿಂದ ತಿಳಿಯಬೇಕಾದ ನೀತಿ ಏನು?
ಉತ್ತರಃ ಸ್ನಾನದ ಕೋಣೆಗೆ ಬಾಗಿಲು ಇರಬೇಕಾದದ್ದು ಅತೀ ಅವಶ್ಯ
ಪ್ರಶ್ನೆಃ ವಾಸ್ಕೋಡಿಗಾಮನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು?
ಉತ್ತರಃ ಏರಡನೇ ಹೆಜ್ಜೆ ಇಟ್ಟನು.
ಬೀChi ಉವಾಚ
ಬೀChi ಅವರ 'ಬೆಳ್ಳಿ ತಿಮ್ಮ 108 ಹೇಳಿದ' ದಿಂದ...
-ಆಳವು ಕಡಿಮೆಯಾದಂತೆಲ್ಲಾ ಉದ್ದದಲ್ಲಿ ಜಾಸ್ತಿಯಾಗುವಂತಹ ರಬ್ಬರ್ ನಂತಹುದಕ್ಕೆ ಭಾಶಣ ಎಂದು ಹೆಸರು.
-ಕಂಡುದರಲ್ಲಿ ಮರೆಯಬೇಕಾದ್ದೆಶ್ಟು, ಅರಿಯಬೇಕಾದ್ದೆಶ್ಟು, ಎಂಬುದನ್ನು ಅರಿತವನೇ ಕಡುಜಾಣ.
'ಆನೇಕರು ನನ್ನ ಗ್ರಂಥವನ್ನು ಓದಿ ಹೊಗಳುತ್ತಾರೆ. ಒಬ್ಬ ಸಾಹಿತಿ ಓದದೆಯೇ ಬಯ್ಯುತ್ತಾನೆ. ಊಟಕ್ಕೆ ಬಂದ ಅತಿಥಿಗಳು ಹೆಚ್ಚೋ ಅಥವಾ ನನ್ನಂತಹ ಇನ್ನೊಬ್ಬ ಅಡಿಗೆಯವನೋ ?' ಎಂದು ಕೇಳುತ್ತಾನೆ ಅವಿವೇಕಿ ತಿಮ್ಮ.
-'ವಿಡಂಬ'ನ ಸಾಹಿತ್ಯ! ಯಾರು ಸ್ವಾಮಿ ವಿಡಂಬ? ಅವನ ಹೆಸರನ್ನೇ ಕೇಳಿಲ್ಲವಲ್ಲ ನಾವು! ಯಾವ ಶತಮಾನದ ಕವಿ 'ವಿಡಂಬ' ಎಂಬುವವನು?
-ಕಟ್ಟಕಡೆಗೆ ನಗುವವನಿಗೆ ಉಬ್ಬುಹಲ್ಲೇ ಇರಬೇಕು.
' ಮುಂಗಾರು ಮಳೆ ' ಹಾಡಿನ ಹೊಸ (!?) ಆವೃತ್ತಿ
ಈ ಹಾಡನ್ನು ಎಲ್ಲರೂ ಈಗಾಗಲೇ ಬೇಕಾದಷ್ಟು ಬಾರಿ ಇ-ಮೇಲ್ ಗಳಲ್ಲಿ ಓದಿರುತ್ತೀರಿ.
ಆದರೂ ಮಳೆ ಬಾರದ ಮಳೆಗಾಲದಲ್ಲಿ ಇನ್ನೊಮ್ಮೆ.....
ಅಂದ ಹಾಗೆ ಇದು ನಾನು ಬರೆದದ್ದಲ್ಲ.... ಇ-ಮೇಲ್ ಫಾರ್ವರ್ಡ್ ಆಧಾರಿತ...
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ,
ನಿನ್ನ ಮುಗಿಲ ಸಾಲೇ, ಮನೆಯ ಗೋಡೆ ಉರುಳಿದ ಮೇಲೆ,
ಸುರಿವ ರಭಸದಾ ಜಡಿ ಮಳೆಗೆ ನೀರು ತುಂಬಿದೆ
ಯಾವ ಹೊತ್ತಿನಲ್ಲಿ ಯಾವ ರೂಮು ಕೆರೆಯಾಗುವುದೋ
ಯಾವ ಪೈಪು ಕುಡಿಯೊಡೆಯುವುದೋ ತಿಳಿಯದಾಗಿದೆ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ಭುವಿಯ ಕೆನ್ನೆ ತುಂಬಾ ಮಳೆಯು ಸುರಿದ ಮುತ್ತಿನ ಗುರುತು
ನಮ್ಮ ರಸ್ತೆ ತುಂಬಾ ಹೊಳೆವ ಕೆಂಪು ಕೆಸರಿನ ಗುರುತು
ಹೆಜ್ಜೆ ಇಟ್ಟರೆ ಜಾರುವ ಸದ್ದು ಕಾಲು ಗಾಯವೋ
ಮನೆಯ ಮುಂದಿನಿಂದ ನೀರು ಚೆಲ್ಲಿ ನಿಂತೆ ನಾನು
ಜಿರಳೆ
ಅದೊಂದು ರಾತ್ರಿ
ನಾನೊಂದ ಕನಸ ಕಂಡೆ
ನನ್ನ ಎದುರಿನಲ್ಲಿ ನಿಂತಿದ್ದಲೋಬ್ಬಳು ಅಪ್ಸರೆ
ಕೊಟ್ಟಲೊಂದು ವರವ ನನಗೆ ಅವಳು
ಮುಂದಿನ ಜನುಮದಲ್ಲಿ ನೀ ಬಯಸಿದ ರೂಪ ಕೊಡುವೆ
ಹಕ್ಕಿಯಗುವೆಯ? ಇಲ್ಲ ದುಂಬಿಯಾಗುವೆಯ?
ಹೂವಗುವೆಯ ಇಲ್ಲ ಝರಿಯಗುವೆಯ?
ನಾ ಹೇಳಿದೆ ಅಪ್ಸರೆಗೆ
ಸುಳ್ಳು
ಒಮ್ಮೆ ಅಪ್ಪ ಸುಳ್ಳು ಹೇಳಿದರೆ ಕಪಾಳಕ್ಕೆ ಹೊಡೆಯುವ ಒಂದು ಬೊಂಬೆ ಯನ್ನು ತಂದ
ಮಗ ಲೇಟಾಗಿ ಮನೆಗೆ ಬಂದ
ಅಪ್ಪ: ಯಾಕೋ ಲೇಟು?
ಮಗ:ಸ್ಪೆಷಲ್ ಕ್ಲಾಸ್ ಇತ್ತು
ಬೊಂಬೆ ಫಟ್ ಅಂಥ ಮಗನ ಕೆನ್ನೆಗೆ ಹೋದೀತು
ಮಗ: ಅಲ್ಲ ಸಿನಿಮಾಗೆ ಹೋಗಿದ್ದೆ
ಅಪ್ಪ: ಯಾವ ಸಿನಿಮ?
ಮಗ: ಯಾವ್ದೋ ಕನ್ನಡ ಸಿನಿಮ

No comments: